ಅಂತ್ಯಕ್ರಿಯೆ ವೇಳೆ ಲಾಕ್ಡೌನ್ ಉಲ್ಲಂಘನೆ: ಮೃತನ ಮಕ್ಕಳು, ಸಂಬಂಧಿಕರು ಹಾಗೂ ಇತರರ ವಿರುದ್ಧ ಕೇಸ್!

lockdown bengaluru
Published on

ಕಲಬುರಗಿ: ಮೃತರ ಅಂತ್ಯಕ್ರಿಯೆಯಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ 70ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂಬ ಕಾರಣಕ್ಕೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಪ್ರಕರಣ ಇದೇ ಮೊದಲು ಎನ್ನಲಾಗುತ್ತಿದೆ.

ಇಸ್ಲಾಮಾಬಾದ್ ಕಾಲನಿ ನಿವಾಸಿ ರಾಮು ಗೌಳಿ ನಿಧನ ಹೊಂದಿದ್ದರು. ಶನಿವಾರ ಮಧ್ಯಾಹ್ನ ರಿಂಗ್ ರೋಡ್ನ ಕೈಗಾರಿಕಾ ವಸಾಹತು ಪ್ರದೇಶದ ಗೇಟ್ ಮುಂಭಾಗದಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡುವಾಗ ಸಂಬಂಧಿಕರು ಸೇರಿ 70ರಿಂದ 80 ಜನ ಭಾಗಿಯಾಗಿದ್ದರು.

ಈ ಸಂಬಂಧ ವಿಡಿಯೋವನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದು ಪೊಲೀಸರ ಗಮನಕ್ಕೆ ತಂದಿದ್ದರಿಂದ ಇನ್ಸ್ಪೆಕ್ಟರ್ ಅಸ್ಲಂ ಬಾಷಾ ಮೃತನ ಮಕ್ಕಳು, ಸಂಬಂಧಿಕರು ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net