ಪ್ರೇಮಿಯನ್ನು ಹೊಸ ಪ್ರೇಮಿಯಿಂದ ಕೊಲೆ ಮಾಡಿಸಿದ ಜತೆಗಾತಿ: ಕಲಬುರಗಿಯಲ್ಲಿ ರೇಣುಕಾಸ್ವಾಮಿ ಮಾದರಿ ಕೇಸ್​

0707KLB01
Published on

ಕಲಬುರಗಿ: ನಟ ದರ್ಶನ ಮತ್ತು ರೇಣುಕಾಸ್ವಾಮಿ ಪ್ರಕರಣದಂತೆ ನಾಪತ್ತೆಯಾಗಿದ್ದಾನೆಂಬ ವ್ಯಕ್ತಿಯೂ ಶವವಾಗಿ ಪತ್ತೆಯಾಗಿದ್ದು, ಆತನನ್ನು ಅಪಹರಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದ್ದು, ಮೂವರು ಕೊಲೆಗಾರರನ್ನು ಬಂಧಿಸಲಾಗಿದೆ.

ಈ ಕುರಿತು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ನಗರದ ಕಮೀಷನರ್​ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶ ನಗರದ ರಾಘವೇಂದ್ರ ನಾಯಕ (೩೬) ಕೊಲೆಯಾದವ. ರಾಘವೇಂದ್ರನ ಜತೆಗೆ ಲಿವಿಂಗ್​ ಟುಗೇದರ್​ (ಸಹಜೀವನ) ಸಂಬಂಧದಲ್ಲಿದ್ದು ಕೈಕೊಟ್ಟ ಅಶ್ವಿನಿ ಅಲಿಯಾಸ ತನು, ಗುರುರಾಜ ನೆಲೋಗಿ, ಲಕ್ಷ್ಮೀಕಾಂತ ಮಾಲಿ ಪಾಟೀಲ್​ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಏನಿದು ಪ್ರಕರಣ: ನಗರದಲ್ಲಿ ಖಾಸಗಿ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದ ರಾವೇಂದ್ರ ನಾಯಕ ಮಾ.೧೨ರಂದು ನಾಪತ್ತೆಯಾಗಿದ್ದಾನೆಂದು ಆತನ ಪತ್ನಿ ಸ್ಟೇಷನ್​ ಬಜಾರ್​ ಠಾಣೆಗೆ ಮೇ.೨೫ರಂದು ದೂರು ನೀಡಿದ್ದರು. ಇದರ ತನಿಖೆ ಬೆನ್ನತ್ತಿದ್ದ ಪೊಲೀಸರಿಗೆ ರಾಯಚೂರಿನ ಶಕ್ತಿ ನಗರ ಠಾಣೆ ವ್ಯಾಪ್ತಿಯ ನದಿಯಲ್ಲಿ ರಾವೇಂದ್ರನ ಮೃತಶವ ಪತ್ತೆಯಾಗಿರುವ ಮಾಹಿತಿ ತಿಳಿದಿದೆ. ಆತನನ್ನು ಕೊಲೆ ಮಾಡಿರುವುದು ತಿಳಿದಿದೆ ಎಂದು ಹೇಳಿದರು.

ತನಿಖೆ ವೇಳೆ ರಾವೇಂದ್ರನು ಲಿವಿಂಗ್​ಟುಗೇದರ್​ನಲ್ಲಿದ್ದ ಅಶ್ವಿನಿಯು ಸಂಬಂಧ ಮುಂದುವರಿಸಲು ನಿರಾಕರಿಸಿದ್ದರೂ ಪದೇ ಪದೆ ಅಶ್ವಿನಿಗೆ ಕರೆ ಮಾಡಿ, ನನ್ನ ಬಳಿ ಬಾ ಎಂದು ಕಿರುಕುಳ ನೀಡಿದ್ದಾನೆ. ಈ ವಿಷಯ ಹೊಸದಾಗಿ ಸಂಬಂಧ ಬೆಳೆಸಿದ ಗುರುರಾಜನ ಗಮನಕ್ಕೆ ತಂದಿದ್ದು, ಬುದ್ಧಿ ಕಲಿಸಲು ನರ‍್ಧರಿಸಿದ್ದಾರೆ. ನಂತರ ರಾವೇಂದ್ರನನ್ನು ಅಪಹರಿಸಿ ಸ್ಮಶಾನವೊಂದರಲ್ಲಿ ಹಲ್ಲೆ ಮಾಡಿ, ರ‍್ಮಾಂಗಕ್ಕೆ ಹೊಡೆದಿದ್ದಾರೆ. ಕೊಲೆ ಮಾಡಿ ಶವವನ್ನು ಕಾರಿನಲ್ಲಿ ಹಾಕಿಕೊಂಡು ರಾಯಚೂರಿನ ಶಕ್ತಿ ನಗರದ ಬಳಿ ಇರುವ ಕೃಷ್ಣಾ ನದಿ ಸೇತುವೆ ಮೇಲಿಂದ ನದಿಯಲ್ಲಿ ಎಸೆದು ಬಂದಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ಪೊಲೀಸ್​ ಆಯುಕ್ತ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಪಿಐ ಶಕೀಲ ಅಹ್ಮದ್​ ಅಂಗಡಿ, ಪಿಎಸ್​ಐ ಇಂದಿರವ್ವ, ಎಎಸ್​ಐ ಶಿವಶರಣಪ್ಪ ಕೊರಳ್ಳಿ ಸಿಬ್ಬಂದಿ ಪ್ರಹ್ಲಾದ್​ ಕುಲ್ರ‍್ಣಿ, ಪ್ರಭಾಕರ, ಜ್ಯೋತಿ, ಯಲ್ಲಪ್ಪ, ಮೋಸಿನ್​, ಸಂಗಣ್ಣ, ಮಲ್ಲಣ್ಣ, ಶಿವಲಿಂಗಪ್ಪ ಅವರನ್ನು ಒಳಗೊಂಡ ತಂಡವು ಯಶಸ್ವಿ ಕರ‍್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಕ್ಕೆ ಶ್ಲಾನೆ ವ್ಯಕ್ತಪಡಿಸಿದರು.

ವೇಶಾವಾಟಿಕೆ ಜಾಲ?: ಮೃತ ರಾವೇಂದ್ರ ನಾಯಕ ವಿರುದ್ಧ, ಕೊಲೆ ಮಾಡಿರುವ ಅಜಲಪುರ ತಾಲೂಕಿನ ಮಲ್ಲಾಬಾದದ ಅಶ್ವಿನಿ ಮತ್ತು ಕಪನೂರದ ಲಕ್ಷಿ$್ಮಕಾಂತ ಮಾಲಿಪಾಟೀಲ್​ ವಿರುದ್ಧ ವೇಶಾವಾಟಿಕೆಯ ಪ್ರಕರಣ ದಾಖಲಾಗಿವೆ ಎಂದು ಕಮೀಷನರ್​ ತಿಳಿಸಿದರು.

೨೦೦ ಕಿ.ಮೀ ಶವ ಸಾಗಣೆ: ಕಲಬುರಗಿಯ ಕೃಷ್ಣಾ ನಗರದ ಸ್ಮಶಾನದಲ್ಲಿ ರಾವೇಂದ್ರ ನಾಯಕನ ಮೇಲೆ ಕೈ ಮತ್ತು ಬಡಿಗೆಯಿಂದ ಹಲ್ಲೆ ಮಾಡಿದ್ದು, ಗುಪ್ತಾಂಗಕ್ಕೆ ಬಿದ್ದ ಏಟಿನಿಂದ ಮೃತಪಟ್ಟಿದ್ದಾನೆ. ಮೃತಪಟ್ಟಾತನನ್ನು ಶಹಾಬಾದ್​ ಮೂಲಕ ರಾಯಚೂರು ಜಿಲ್ಲೆ ಶಕ್ತಿ ನಗರದ ಕೃಷ್ಣಾ ಸೇತುವೆ ಬಳಿ ಸುಮಾರು ೨೦೦ ಕಿ.ಮೀ. ದೂರ ಕಾರಿನಲ್ಲಿ ಸಾಗಿಸಿ, ನದಿಯಲ್ಲಿ ಬಿಸಾಡಿದ್ದಾರೆ ಎಂದು ಪೊಲೀಸ್​ ಕಮೀಷನರ್​ ಡಾ.ಶರಣಪ್ಪ ಎಸ್​.ಡಿ.ತಿಳಿಸಿದರು.

ಮನೆ ಬಿಟ್ಟು ಹೋಗುತ್ತಿದ್ದ ರಾಘವೇಂದ್ರ: 

ಕೊಲೆಗೀಡಾಗಿರುವ ರಾವೇಂದ್ರ ನಾಯಕ ಆಗಾಗ ಮನೆ ಬಿಟ್ಟು ಹೋಗುತ್ತಿದ್ದ. ೮&೧೦ ದಿನ ಬಿಟ್ಟು ಮರಳಿ ಮನೆಗೆ ಬರುತ್ತಿದ್ದ. ಆದ್ದರಿಂದ ರಾವೇಂದ್ರನ ಪತ್ನಿಯೂ ನಾಪತ್ತೆಯಾದ ಎರಡು ತಿಂಗಳ ನಂತರ ಸ್ಟೇಷನ್​ ಬಜಾರ್​ ಠಾಣೆಗೆ ದೂರು ನೀಡಿದ್ದರು ಎಂದು ಕಮೀಷನರ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net