ಕಲಬುರಗಿ ಜೈಲಿಂದ ಖತರ್ನಾಕ್ ಕೈದಿಗಳ ಶಿಫ್ಟ್

jail
Published on

ಕಲಬುರಗಿ: ನಗರದ ಹೊರವಲಯದ ಸೆಂಟ್ರಲ್ ಜೈಲ್‌ ನಲ್ಲಿ ಕೈದಿಗಳ ಹೈ ಫೈ ಲೈಫ್ ಸುಪರಿಡೇಂಟ್ ಗೆ ಜೀವ ಬೆದರಿಕೆ ಸೇರಿದಂತೆ ಸರಣಿ ಅಕ್ರಮ, ಗೊಂದಲದ ಘಟನೆಗಳಿಗೆ ತಿಲಾಂಜಲಿ ಇಡಲು ಬಂದಿಖಾನೆ ಇಲಾಖೆ ದೃಢ ಹೆಜ್ಜೆ ಇಟ್ಟಿದ್ದು, ಜೈಲಿನಿಂದ ಆರು ಕೈದಿಗಳನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಯಿತು.

2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಜುಲ್ಫಿಕರ್ ನನ್ನು ಎನ್ ಐ ಎ ಕೋರ್ಟ್ ನ ಅನುಮತಿ ಮೇರೆಗೆ ಉಗ್ರ ಜುಲ್ಫಿಕರ್ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಶಿವಮೊಗ್ಗ ಕೋರ್ಟ್ ಅನುಮತಿ ಮೇರೆಗೆ, ಉಳಿದ ನಾಲ್ಕು ಕೈದಿಗಳನ್ನ ಆಯಾ ಕೋರ್ಟ್ ಮತ್ತು ಕಾರಾಗೃಹ ಇಲಾಖೆಯ ನಿರ್ಣಯದ ಮೇರೆಗೆ ಶಿಫ್ಟ್ ಮಾಡಲಾಗಿದೆ.

ಜಮೀರ @ ಬಚ್ಚನ್ ತಂದೆ ಚಾಂದ ಪೀರ್ ನನ್ನು ಬೆಳಗಾವಿಯಲ್ಲಿ ಕೇಂದ್ರ ಕಾರಾಗೃಹಕ್ಕೆ ಧಾರವಾಡ ಜೈಲಿಗೆ ಅಬ್ದುಲ್ ಖಾದರ್ ಜಿಲಾನಿ ಮತ್ತು ಜುಲ್ಫಿಕರ್ ಅಲಿ ತಂದೆ ಮಹಮ್ಮದ್ ಹನೀಫ್ ನನ್ನು ವರ್ಗ ಮಾಡಲಾಗಿದೆ.

ಶಿವಮೊಗ್ಗ ಜೈಲಿಗೆ ಶೇಖ್ ಸದಾಂ ಹುಸೇನ್ ಮತ್ತು ಜಾಕೀರ್ ತಂದೆ ಹನೀಫ್ ನನ್ನು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವಿಶಾಲ್ ತಂದೆ ವಿಜಯಕುಮಾರ್ ರಾಠೋಡ್ ನನ್ನು ಗುರುವಾರ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net