ಅಬಕಾರಿ ಭರ್ಜರಿ ಭೇಟೆ ವಿವಿಧೆಡೆ ಅಕ್ರಮ ಮದ್ಯ ವಶಕ್ಕೆ

IMG-20230404-WA0016
Published on

ಕಲಬುರಗಿ: ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಸಾಗಾಟದ ಮೇಲೆ ಅಬಕಾರಿ ಹದ್ದಿನ ಕಣ್ಣಿಟ್ಟಿದ್ದು, ಕಲಬುರಗಿ ಜಿಲ್ಲೆಯ ವಿವಿಧೆಡೆ ಅಬಕಾರಿ ಅಧಿಕಾರಿಗಳಿಂದ ದಾಳಿ ನಡೆಸಿ ಲಕ್ಷಾಂತರ ರೂಪದಲ್ಲಿ ಮೌಲ್ಯದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.

ಅಫಜಲಪೂರ ತಾಲೂಕಿನ ಚೌಡಾಪುರ ಬಳಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 84 ಸಾವಿರ ರೂ. ಮೌಲ್ಯದ 198 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಶೇಖರ್ ಎಂಬಾತನನ್ನು ಬಂಧಿಸಿ ಕಾರು ವಶಕ್ಕೆ ಪಡೆಯಲಾಗಿದೆ.

ಚಿತ್ತಾಪೂರ ತಾಲೂಕಿನ ಕುಂಬಾರ ಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಲೀಟರ್ ಕಲಬೆರಕೆ ಸೇಂದಿ ವಶಕ್ಕೆ ಪಡೆದಿದ್ದು, ಕಲಬೇರಕೆ ಸೇಂದಿ ಸಾಗಾಟ ಮಾಡ್ತಿದ್ದ ಬಾಶಾಮಿಯಾನನ್ನು ಬಂಧಿಸಲಾಗಿದೆ.

15 ಸಾವಿರ ಮೌಲ್ಯದ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ಕೂಡ ವಶಕ್ಕೆ ಪಡೆಯಲಾಗಿದೆ.

ಸೇಡಂ ತಾಲೂಕಿನ ಬಟಗೇರ ಬಿ ಬಳಿ 51.840 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದು, ಸಾಗಿಸುತ್ತಿದ್ದ ಆರೋಪಿ ಪರಾರಿಯಾಗಿದ್ದಾನೆ. ಒಂದು ಬೈಕ್ ಹಾಗೂ 20 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net