ಕಲಬುರಗಿಯಲ್ಲಿ ಅಂಚೆ ಮತ ಎಣಿಕೆ ಆರಂಭ

IMG-20230513-WA0010
Published on

ಕಲಬುರಗಿ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕಾರ್ಯವು‌ ನಗರದ ಹೊರ ವಲಯದ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭ.

ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಬಳಿಕ ಮತ ಯಂತ್ರಗಳ‌‌ ಮತಗಳನ್ನು ಎಣಿಕೆ ಮಾಡಲಾಗುತ್ತದೆ. 9 ಕ್ಷೇತ್ರಗಳಲ್ಲಿ ಸುಮಾರು 9180 ಜನರು ಅಂಚೆ ಮತದಾನ ಮಾಡಿದ್ದಾರೆ.

8 ಗಂಟೆಗೆ ಕ್ಕೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಒಡೆಯಲಾಯಿತು.

ಮತ ಎಣಿಕೆಗಾಗಿ ಗುವಿವಿಯ 9 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.‌ ಪ್ರತಿ ಕೇಂದ್ರದಲ್ಲಿ 16 ಟೇಬಲ್ ಗಳಲ್ಲಿ ಎಣಿಕೆ ನಡೆಯಲಿದೆ.
81 ಎಣಿಕೆ ಮೇಲ್ವಿಚಾರಕರು, 81 ಎಣಿಕೆ ಸಹಾಯಕರು, 10 ಮೈಕ್ರೋ ವೀಕ್ಷರು ಇದ್ದು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ‌
ಪ್ರತೀ ಕೋಣೆಯಲ್ಲಿ 16 ಟೇಬಲ್ ಗಳಲ್ಲಿ ನಡೆಯಲಿರುವ ಮತ ಎಣಿಕೆ

16 ಟೇಬಲ್ ಗಳ ಪೈಕಿ 14 ಟೇಬಲ್ ಗಳಲ್ಲಿ ಇವಿಎಂ ಮತಯಂತ್ರಗಳು ಹಾಗೂ 2 ಟೇಬಲ್ ಗಳಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ.

ಸಿಆರ್ ಪಿಎಫ್ ಯೋಧರು, 5 ಕೆಎಸ್ಆರ್ಪಿ ತುಕಡಿ, 3 ಸಿಆರ್ ತುಕಡಿ ಸೇರಿದಂತೆ 1500 ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net