ಕಲಬುರಗಿ ಉತ್ತರದಲ್ಲಿ ಬಿಜೆಪಿ ಏಜೆಂಟ್ ಗೆ ಒಳ ಬಿಡದ ಕಾಂಗ್ರೆಸ್ ಕಾರ್ಯಕರ್ತರು…

Screenshot_2024-05-07-09-41-08-64_99c04817c0de5652397fc8b56c3b3817
Published on

ಕಲಬುರಗಿ: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ವಿವಿಧ ಪೊಲೀಂಗ್ ಬೂತ್ ಗಳಲ್ಲಿ ಬಿಜೆಪಿ ಏಜೆಂಟ್ ಗಳನ್ನು ಒಳಗೆ ಬಿಡದೆ ಇರುವ ಘಟನೆ ನಡೆದಿದೆ.

ಉತ್ತರ ವಿಧಾನ ಸಭೆ ಕ್ಷೇತ್ರದ ಪೊಲೀಂಗ್ ಬೂತ್ ಸಂಖ್ಯೆ 38 ತಾಜ್ ಕಾಲೇಜ್, 71 ಶೇಖ್ ರೋಜಾ, 151, 152 ಮೋಮಿನ್ ಪುರ, 266 ರೋಜಾ ಕಾಲನಿ, 113 ಉಮರ್ ಕಾಲನಿಗಳಲ್ಲಿ ಬಿಜೆಪಿ ಪಕ್ಷದ ಪೊಲೀಂಗ್ ಏಜೆಂಟ್ ನ್ನು ಒಳಗೆ ಕಾಂಗ್ರೆಸ್ ಕಾರ್ಯಕರ್ತರು ಒಳಗೆ ಬಿಡದಿರುವ ವಿಷಯ ತಾಳಿದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ವಾಗ್ವಾದ ನಡೆಯಿತು.

ಇಷ್ಟೆಲ್ಲ ಘಟನೆ ನಡೆದರೂ ಪೊಲೀಂಗ್ ಅಧಿಕಾರಿಗಳು ಮೌನ ವಹಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಾ.ಜಾಧವ್ ತಕ್ಷಣ ಏಜೆಂಟ್ ನನ್ನು ಒಳಗೆ ಕರೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net