ಜೀವನದ ದಿಸೆ ಬದಲಿಸುವ ಸಂಕಲ್ಪ

0801KLb05
Published on

ಕಲಬುರಗಿ: ಶಿಸ್ತು ಇದ್ದಲ್ಲಿ ಸರ್ವಕಾರ್ಯವೂ ಯಶಸ್ವಿಯಾಗಿ ಸಾಗುತ್ತದೆ. ಜೀವನದಲ್ಲಿ ಶಿಸ್ತಿನೊಂದಿಗೆ ಉತ್ಸಾಹ ತುಂಬಿ ವಿದ್ಯಾರ್ಥಿಗಳ ಜೀವನದ ದಿಸೆ ಬದಲಿಸುವ ಸಂಕಲ್ಪದೊAದಿಗೆ ದಿಶಾ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳು ಉನ್ನತ ಧ್ಯೇಯದೊಂದಿಗೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಉಪ ನಿರ್ದೇಶಕ ಅಶೋಕ ಶಾಸ್ತ್ರಿ ಹೇಳಿದರು. ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡ ಸಂಕಲ್ಪ ಫೌಂಡೇಷನ್‌ನ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಉತ್ಕೃಷ್ಟ ದರ್ಜೆಯ ಶಿಕ್ಷಣದ ಗುರಿಯೊಂದಿಗೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಾರ್ಚ್ನಲ್ಲಿ ಪರೀಕ್ಷೆ ಆರಂಭವಾಗಿದ್ದು, ಶಿಸ್ತು, ಸಮಯ ಪ್ರಜ್ಞೆಯೊಂದಿಗೆ ಶ್ರದ್ಧೆಯಿಂದ ಬೋಧನೆ ಆಲಿಸಿ ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಸತತ ಅಧ್ಯಯನ ಮಾಡಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯಾಸ ಮಾಡಿದರೆ ಕೀರ್ತಿ ಬರುತ್ತದೆ. ನಿರಂತರ ಓದು, ಬರಹ ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸ ಇರಲಿ ಎಂದರು. ಸAಸ್ಥೆ ಅಧ್ಯಕ್ಷ ಶಿವಾನಂದ ಖಜೂರ್ಗಿ ಮಾತನಾಡಿ, ಕಾಲೇಜು ಜೀವನ ಬದುಕನ್ನು ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಕ್ಷಣ. ಅತ್ಯುತ್ತಮ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ವ್ಯಕ್ತಿಕತ್ವ ರೂಪಿಸುವುದಕ್ಕಾಗಿ ಹಗಲಿರುಳು ಶ್ರಮಿಸಲಾಗುತ್ತಿದೆ. ನಮ್ಮ ಕಾಲೇಜು ಕಲ್ಯಾಣ ಕರ್ನಾಟಕ ಭಾಗದಲ್ಲೇ ಕೀರ್ತಿ ಹೊಂದಿದ್ದು, ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಮಾತನಾಡಿ, ಕಾಲೇಜು ಅಧ್ಯಯನಕ್ಕೆ ದಿಸೆ ತೋರಿಸುತ್ತದೆ. ಉಪನ್ಯಾಸಕರ ಬೋಧನೆ ಆಲಿಸಿ, ಕನಸು ನನಸು ಮಾಡಿ. ಗಣಿತ ಮೆಷ್ಟç ಕೈಯಲ್ಲಿ ಕಲಿತವರ ಲೆಕ್ಕಾಚಾರ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು. ಸಂಕಲ್ಪ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಮಾನಕರ, ಜಂಟಿ ಕಾರ್ಯದರ್ಶಿ ಗುರುರಾಜ ಮುಕ್ಕಾ, ಖಜಾಂಚಿ ನಿತೀನ ತಾಂದಳೆ, ಟ್ರಸ್ಟಿಗಳಾದ ವೆಂಕಟೇಶ ಅಮ್ಮಣ, ಡಾ.ಸಂಜೀವರೆಡ್ಡಿ, ಸಂಪತ್ ಸಾರಡಾ, ಯುವರಾಜ ಚಿಂಚೋಳಿ, ಮುಕೇಶ ಮಾಲು, ಸಂತೋಷ ಜಕಾಪುರೆ ಇತರರಿದ್ದರು. ಶ್ರೀಲಕ್ಷ್ಮೀ  ಸಿದ್ದಪ್ಪ ಅತಿಥಿ ಪರಿಚಯಿಸಿದರು. ವೈಷ್ಣವಿ ಅಂಕದೊಡ್ಡಿ ಸ್ವಾಗತಿಸಿದರು. ಸೃಷ್ಟಿ ಸೈದಾಪುರ ವಂದಿಸಿದರು.

ಬೆಂಗಳೂರಿಗಿಂತ ಉತ್ತಮ ಬೋಧನೆ, ಸೌಲಭ್ಯ ನಮ್ಮಲ್ಲಿ ದೊರೆಯುತ್ತಿದೆ. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಅಧ್ಯಯನಶೀಲರಾಗಿ. ಹುಮ್ಮಸ್ಸಿನಿಂದ ಮುನ್ನುಗಬೇಕು. ಅಧ್ಯಾಪಕರ, ಪಾಲಕರ, ಕಾಲೇಜಿನ ನಿರೀಕ್ಷೆ ದುಪ್ಪಟ್ಟು ಆಗಲಿ. ಸಮಾಜಮುಖಿ ವ್ಯಕ್ತಿಗಳಾಗಿ ಹೊರಹೊಮ್ಮಲಿ. | ಅಶೋಕ ಶಾಸ್ತ್ರಿ, ಡಿಡಿಪಿಯು ದಿಶಾ ಕಾಲೇಜು ಸಿಇಟಿಯಲ್ಲಿ ಎರಡಂಕಿ ರ‍್ಯಾಂಕ್‌ಗೆ ಬಂದಿದ್ದು, ನೀಟ್‌ನಲ್ಲಿ ೬೦೦ಕ್ಕಿಂತ ಹೆಚ್ಚು ಅಂಕ ಪಡೆಯಲಾಗುತ್ತಿದೆ. ಜೆಇಇಯಲ್ಲಿ ರ‍್ಯಾಂಕ್ ಪಡೆದು ನಮ್ಮ ವಿದ್ಯಾರ್ಥಿ ಐಐಟಿ ಪ್ರವೇಶಿಸಿದ್ದಾನೆ. ಎಲ್ಲ ಮಾದರಿ ಪರೀಕ್ಷೆಯಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದು, ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳು ಇಂಜಿನಿಯರ್, ವೈದ್ಯ ಏನಾದರೂ ಆಗಲಿ. ತಂದೆ, ತಾಯಿಯನ್ನು ಗೌರವಿಸಿ. ಅವರ ಕಣ್ಣೀರು ಒರೆಸಿ. ಹಣವುಳ್ಳ ಶ್ರೀಮಂತಿಕೆಗಿAತ ಗುಣವಂತ ಪ್ರಜೆ ಆಗಲಿ. ಗುಣಕ್ಕೆ ಸೋಲಿಲ್ಲ. | ಶಿವಾನಂದ ಖಜೂರ್ಗಿ, ಅಧ್ಯಕ್ಷ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜು ದಿಶಾ ಕಾಲೇಜಾಗಿರಲಿಲ್ಲ. ಮನೆಯಂತೆ ಇತ್ತು. ಬರೀ ಪುಸ್ತಕ, ಪಾಠ ಎನ್ನದೆ ಜೀವನದ ಪಾಠ ಕಲಿಸಿದೆ. ಶಿಕ್ಷಕರು ನಮ್ಮ ಜೀವನಕ್ಕೆ ದಾರಿತೋರಿದ್ದಾರೆ. ಸಮಸ್ಯೆ ಎದುರಿಸುವ ಶಕ್ತಿ, ಪರಿಹಾರದ ಯುಕ್ತಿ ಕಾಲೇಜಿನಲ್ಲಿ ದೊರಕಿದೆ. | ವೈಷ್ಣವಿ ಪಲ್ಲೇರಿ, ವಿದ್ಯಾರ್ಥಿನಿ ಪಾಠದೊಂದಿಗೆ ಸಂಸ್ಕಾರದ ಅಮೃತದ ಜ್ಞಾನ ಧಾರೆ ದಿಶಾ ಶಿಕ್ಷಕರು ಎರೆದಿದ್ದಾರೆ. ಪ್ರೀತಿ, ಕಾಳಜಿಯೊಂದಿಗೆ ಓದಿಗೆ ಸ್ಫೂರ್ತಿ ತುಂಬಿ, ಕಡಿಮೆ ಅಂಕದವರಿಗೆ ಹೆಚ್ಚು ಪ್ರೋತ್ಸಾಹಿಸುವ ಅತ್ಯುತ್ತಮ ಮ್ಯಾನೆಜ್ಮೆಂಟ್ ಕಾಲೇಜು ನಮ್ಮದು. | ಗುರುಪ್ರಸಾದ, ವಿದ್ಯಾರ್ಥಿ ಎರಡು ವರ್ಷದ ಶಿಕ್ಷಣದಲ್ಲಿ ಜೀವನ ಎದುರಿಸುವ ಕಲೆ ಕಲಿತೆ. ಬೋಧನೆ ಅಷ್ಟೇ ಅಲ್ಲ ಪ್ರೇರಣೆ ನೀಡಿದರು. ಸ್ವಾತಂತ್ರÈ ನೀಡಿ ಮಾರ್ಗ ತೋರಿದರು. ವಿದ್ಯಾರ್ಥಿಗಳ ವಿಚಾರಗಳಿಗೆ ಸ್ಫೂರ್ತಿ ತುಂಬಿದರು. | ಏಕತಾ, ವಿದ್ಯಾರ್ಥಿನಿ.

ಜೀವನೋತ್ಸಾಹದ ಸಾಂಸ್ಕೃತಿಕ ಸಮ್ಮಿಲನ

ದಿಶಾ ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ನೃತ್ಯ, ನಾಟಕ ಸೇರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ತುಂಬಿದವು. ಭರತನಾಟ್ಯದ ಕಾಲ್ಗೆಜ್ಜೆಯ ನೃತ್ಯ ಪ್ರೇಕ್ಷಕರ ಮನತಣಿಸಿದರೆ, ಚಕ್ ದೇ ಇಂಡಿಯಾ ಗೀತೆಯ ನೃತ್ಯ ದೇಶಭಕ್ತಿ ಅನುರಣಿಸಿತು. ತಿಂಗಳು ಮುಳುಗಿದವೂ ಜಾನಪದ ಗೀತೆ ಹಳ್ಳಿ ಸೊಗಡು ಬಿತ್ತಿದ್ದರೆ, ಸಾಂಪ್ರದಾಯಿಕ ಲಂಬಾಣಿ ನೃತ್ಯವೂ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಆಧುನಿಕ ಸಿನೆಮಾ ಗೀತೆಗಳು ಸೇರಿ ದೇಶದ ವಿವಿಧ ಭಾಷೆಗಳ ಗೀತೆಗಳಿಗೆ ವಿದ್ಯಾರ್ಥಿಗಳು ಮನಸ್ಸು ಬಿಚ್ಚಿ ಹೆಜ್ಜೆ ಹಾಕಿದರೆ, ಪ್ರೇಕ್ಷಕರ ಸಾಲಿನಲ್ಲಿದ್ದ ವಿದ್ಯಾರ್ಥಿಗಳು ಕೂಗು ಚಪ್ಪಾಳೆ ತಟ್ಟಿ, ತಾವು ನಿಂತಲ್ಲೆ ಕುಣಿದು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಿಂದ ಪ್ರದರ್ಶನವಾದ ಮತ್ತೆ ಮುತ್ತಾದ ಮುತ್ತು ನಾಟಕ ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿತು. ಬಡ ಹೆತ್ತವರು ಮಗನ ಶಿಕ್ಷಣಕ್ಕೆ ಖರ್ಚು ಮಾಡಿದ್ದು, ದಾರಿ ತಪ್ಪಿದ ಮಗನನ್ನು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸರಿದಾರಿಗೆ ತಂದು, ಹೆತ್ತವರಿಗೆ ಒಪ್ಪಿಸುವ ಕಥೆ, ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net