ಕಲಬುರಗಿಯಲ್ಲಿ ಕರೊನಾಗೆ ಮತ್ತೊಂದು ಬಲಿ: ತಬ್ಲಿಘಿ ಜಮಾತ್​ಗೆ ಹೋಗಿ ಬಂದವರ ನೇರ ಸಂಪರ್ಕದಲ್ಲಿದ್ದ ವೃದ್ಧ

Corona
Published on

ಕಲಬುರಗಿ: ‌ಮಹಾಮಾರಿಯಂತೆ ಕಾಡುತ್ತಿರುವ ಕರೊನಾ ಸೋಂಕಿಗೆ ಕಲಬುರಗಿ ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದರೆ, ರಾಜ್ಯದಲ್ಲಿ ಸತ್ತವರ ಸಂಖ್ಯೆ 17 ಆದಂತಾಗಿದೆ.

ಕಲಬುರಗಿಯಲ್ಲಿ 80 ವರ್ಷದ ವೃದ್ದ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದರು. ನಿನ್ನೆ ಗಂಟಲು‌ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ಆತ ಮೃತಪಟ್ಟಿದ್ದಾನೆ.‌ ಮೃತ ವೃದ್ದನಿಗೆ ಸೋಂಕು ಇತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ‌ ಡಾ.ಸುಧಾಕರ್‌ ಟ್ವೀಟ್ ಮಾಡಿದ್ದಾರೆ.

ಇಎಸ್ಐಸಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗುತ್ತಿತ್ತು. ವಯೋಸಹಜ ಕಾಯಿಲೆಗಳ ಜತೆಗೆ ಆತನಿಗೆ ಕರೊನಾ ಕಂಡು ಬಂದಿತು. ಈ ವೃದ್ಧ ದೆಹಲಿ ಜಮಾತ್​ಗೆ ಹೋಗಿ ಬಂದವರ ನೇರ ಸಂಪರ್ಕದಲ್ಲಿ ಇದ್ದ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net