ಕಲಬುರಗಿ ಸೈಕಲ್​ ಟ್ರ್ಯಾಕ್​ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯಲಿ- ಅಲ್ಲಮಪ್ರಭು

PH 10
Published on

ಕಲಬುರಗಿ: ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲ್​ ಅವರು ಪಾಲಿಕೆಯವರು ಕೈಗೆತ್ತಿಕೊಂಡಿರುವ ನಗರ ಮೂಲ ಸವಲತ್ತು ಅಭಿವೃದ್ಧಿಯ ಡಲ್ಟ್‌ ಯೋಜನೆಯಡಿಯಲ್ಲಿ ಸೇಡಂ ರಸ್ತೆಯಲ್ಲಿ ಬರುವ ಅನ್ನಪೂರ್ಣ ಕ್ರಾಸ್‌ ನಿಂದ ಖರ್ಗೆ ಪೆಟ್ರೋಲ್‌ ಬಂಕ್‌ ವರೆಗೆ, ಜಗತ್‌ನಿಂದ ಪಟೇಲ್‌ ವೃತ್ತದವರೆಗೆ, ರಾಜಾಪುರ ರಸ್ತೆಯಲ್ಲಿ ಸೈಕಲ್‌ ಟ್ರಾಕ್‌ (ಜಗತ್‌ನಿಂದ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಸೈಕಲ್‌ ದಾರಿ) ಪಟೇಲ್‌ ವೃತ್ತದಿಂದ ಹೂರಾಪೂರ ವೃತ್ತದವರೆಗೆ ಕೈಗೆತ್ತಿಕೊಳ್ಳಲಾಗಿರುವ ಸೈಕಲ್‌ ಟ್ಯ್ರಾಕ್‌ ಸಮೇತ ಬಸ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ (ಬಿಆರ್‌ಟಿಎಸ್‌) ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಒಟ್ಟು ಮೊತ್ತ 23 ಕೋಟಿ ರುಪಾಯಿಗಳಾಗಿದ್ದು ಇವೆಲ್ಲವೂ 2021 ರಲ್ಲೇ ಟೆಂಡರ್‌ ಆಗಿದ್ದು 2024 ರೊಳಗೇ ಕಾಮಗಾರಿಗಳು ಪೂರ್ಣಗೊಂಡು ಜನತೆಗೆ ಬಳಕೆಗೆ ನೀಡಬೇಕಿದೆ. ಆದರೆ ಏನಕೇನ ಕಾರಣಗಳಿಂದಾಗಿ ಸದರಿ ಕಾಮಗಾರಿಗಳು ನಿಧಾನಕ್ಕೆ ಸಾಗಿದ್ದು, ಕೂಡಲೇ ವೇಗದಲ್ಲಿ ಕೆಲಸ ಆಗಬೇಕು. ನಿಗದಿತ ಅವಧಿಯಲ್ಲಿ ಎಲ್ಲ ಮುಗಿಬೇಕು ಎಂದು ಕಾಮಗಾರಿ ಗುತ್ತಿಗೆದಾರರು, ಪಾಲಿಕೆ ಇಂಜಿನೀಯರ್‌ಗಳಿಗೆ ನಿರ್ದೇಶನ ನೀಡಿದರು.

ರಸ್ತೆಯಲ್ಲಿ ಪಾದಚಾರಿ ಪಥ, ಸೈಕಲ್‌ ಪಥಗಳು ಬೇರೆಯಾಗಿ ಪ್ರತ್ಯೇಕವಾಗಿ ಆದಲ್ಲಿ ಜನತೆಗೆ ಅನುಕೂಲವಾಗಲಿದೆ. ರಸ್ತೆಗಳು ಹೆಚ್ಚು ಸುರಕ್ಷಿತವಾಗಲಿವೆ. ಪಾಲಿಕೆಯ ಅಧಿಕಾರಿಗಳು ಈ ಕಾಮಗಾರಿಗಳು ನಿಗದಿಯಂತೆ ಪೂರ್ಣಗೊಳ್ಳುವಂತೆ ಉಸ್ತುವಾರಿ ವಹಿಸಬೇಕಂದು ತಾಕೀತು ಮಾಡಿದರು.

ಪಾಲಿಕೆ ಇಇ ಶಿವನಗೌಡ ಪಾಟೀಲ್‌, ಕಾಮಗಾರಿಗಳ ಗುತ್ತಿಗೆದಾರರಲ್ಲಿ ದೇವರಾಜ ವಾರದ್‌ ಹಾಗೂ ಬಿಎಸ್‌ ಬಿರಾದಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net