ಕಲಬುರಗಿಯಲ್ಲಿ ಮತ್ತೊಂದು ಕೇಸ್: ಅಪಹರಿಸಿ, ಬರ್ಬರ ಹಲ್ಲೆ?

WhatsApp Image 2025-05-21 at 10.23.22 PM
Published on

ಕಲಬುರಗಿ: ನಗರದಲ್ಲಿ ಯುವಕನೊಬ್ಬನನ್ನು ಸಿನಿಮಿಯ ರೀತಿಯಲ್ಲಿ ಅಪಹರಿಸಿ, ಗಂಭೀರವಾಗಿ ಹಲ್ಲೆ ನಡೆಸಿದ ಟನೆ ನಡೆದಿದೆ ಎನ್ನಲಾಗಿದೆ. ಆಕಾಶ ಉಡಗಿ (23) ಹಲ್ಲೆಗೆ ಒಳಗಾದ ಯುವಕ ಎನ್ನಲಾಗಿದೆ.

ಕಳೆದ ರಾತ್ರಿ ನಗರದ ಬಿದ್ದಾಪುರ ಕಾಲನಿಯ ಮನೆಯಲ್ಲಿದ್ದ ಯುವಕನನ್ನು 15&20ರ ಜನರ ಕಿಡಿಗೇಡಿಗಳು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆಗೈದು ಹಣ ದೋಚಿದೆ ಎನ್ನಲಾಗಿದೆ. ಮನೆಗೆ ನುಗ್ಗಿ ಆಕಾಶನನ್ನು ಅಪಹರಿಸಿ, ಮನಸೋ ಇಚ್ಚೆ ಹಲ್ಲೆಗೈದು ಅಫಜಲಪುರ ತಾಲೂಕಿನ ಗೊಬ್ಬುರ ಬಳಿ ರ್ನಿಜನ ಪ್ರದೇಶದಲ್ಲಿ ಬಿಟ್ಟು ಪರಾರಿಗೈಯಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯುವಕನನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ಜನರ ಗುಂಪು ಅಪಹರಿಸಿ, ಹಲ್ಲೆ ನಡೆಸಿ, ಡಾಬಾದಲ್ಲಿ ಊಟ ಮಾಡಿ, 15 ಸಾವಿರ ರೂ. ಬಿಲ್​ನ್ನು ಯುವಕನಿಂದ ಕೊಡಿಸಿ, 70 ಸಾವಿರ ರೂ. ಪೋನ್​ ಪೇ ಮಾಡಿಸಿಕೊಂಡು ಹಲ್ಲೆಗೈದಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net