

ಕಲಬುರಗಿ: ಮಹಾನಗರ ಪಾಲಿಕೆಯ ಸದಸ್ಯರಿಗೆ ಪಾಲಿಕೆಯಿಂದ ನಿವೇಶನ ನೀಡಬೇಕು, ಕಾರ್ಪೊರೇಟರ್‌ಗಳ ಕಾಲನಿ ಇರಬೇಕು ಎಂದು ಸದಸ್ಯ ಸಾಜಿದ್ ಕಲ್ಯಾಣಿ ಮಂಗಳವಾರ ಏರ್ಪಡಿಸಿದ್ದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೈಯದ್ ಅಹ್ಮದ್, ಪಾಲಿಕೆಯ ಹಣಕಾಸಿನ ಸ್ಥಿತಿ ಸರಿಯಿಲ್ಲ, ನಾವು ಜನರ ಸಮಸ್ಯೆ ನೀಗಿಸಲು ಬಂದಿz್ದೆÃವೆ. ನಮ್ಮ ಅಗತ್ಯತೆ ಪೂರೈಸಿಕೊಳ್ಳಲು ಅಲ್ಲ ಎಂದು ಆಕ್ಷೇಪಿಸಿದರು. ಶಾಸಕರು, ಸಂಸದರಿಗೆ ನೀಡುತ್ತಾರೆ ನಮಗೇಕೆ ಇಲ್ಲ ಎಂದು ಸಾಜಿದ್ ಮರು ಪ್ರಶ್ನಿಸಿದರು. ಆಡಳಿತ ಪಕ್ಷದ ನಾಯಕ ಕೃಷ್ಣಾ ನಾಯಕ ೧೯೯೧ರಲ್ಲಿ ಸದಸ್ಯರಿಗೆ ಶೆಟರ್ ನೀಡಲಾಗಿತ್ತು ಎಂದರು.
ಇದು ಇಲ್ಲಿ ಚರ್ಚೆ ಆಗುವ ವಿಷಯವಲ್ಲ ಎಂದು ಪ್ರತಿ ಪಕ್ಷ ನಾಯಕ ಗೋಲಾ ತಿಳಿಸಿದರು. ಶಂಬು ಬಳಬಟ್ಟಿ ಹಣದ ಸ್ಥಿತಿಗತಿ ಸರಿಯಲ್ಲ ಬೇಡವೆಂದರು. ಹಿರಿಯ ಸದಸ್ಯ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ನಿಯಮದಲ್ಲಿ ಸದಸ್ಯರಿಗೆ ನಿವೇಶನಕ್ಕೆ ಅವಕಾಶವಿಲ್ಲ. ಪ್ರತ್ಯಕ್ಷ, ಪರೋಕ್ಷವಾಗಿ ಸದಸ್ಯ ಸೌಲಭ್ಯ ಪಡೆಯುವಂತಿಲ್ಲ. ಪಡೆದರೆ ಸದಸ್ಯತ್ವ ಹೋಗುತ್ತೆ ಎಂದರು. ಸಲಹಾ ಸಮಿತಿಯಲ್ಲಿ ಚರ್ಚಿಸೋಣ ಎಂದು ಚರ್ಚೆಗೆ ಮೇಯರ್ ವಿಶಾಲ ದರ್ಗಿ ಅಂತ್ಯ ಹಾಡಿದರು.