ಡ್ರಗ್ ಸಪ್ಲೈಯರ್ ಮೇಲೆ ಕಲಬುರಗಿ ಪೊಲೀಸ್ ಫೈರಿಂಗ್

IMG-20250111-WA0005
Published on

ಕಲಬುರಗಿ: ನಗರದಲ್ಲಿ ಅಕ್ರಮವಾಗಿ ಡ್ರಗ್ ಸಪ್ಲೈ ಮಾಡ್ತಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಅಕ್ರಮವಾಗಿ ಡ್ರಗ್ ಪೂರೈಸುತ್ತಿದ್ದ ಸುಪ್ರೀತ್ ನವಲೇ (32) ಮೇಲೆ ಫೈರಿಂಗ್ ನಡೆಸಿದ ಪೊಲೀಸರು.

ಕಲಬುರಗಿ ಹೊರ ವಲಯದ ತಾವರಗೇರಾ ಬಳಿ ಸುಪ್ರೀತ್ ಎಡಗಾಲಿಗೆ ಗುಂಡು ಹೊಡೆದು ಬಂಧನ ಮಾಡಿದ್ದಾರೆ.

ಅಕ್ರಮವಾಗಿ ಕಾರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಾ ಮಾಡ್ತಾ ಇದ್ದ ಅನ್ನೋ ಮಾಹಿತಿ ಮೇರೆಗೆ ಪೊಲೀಸ್ ದಾಳಿ ನಡೆಸಿದ್ದರು, ಪೊಲೀಸರು ಕಾರ್ ನಿಲ್ಲಿಸಿ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಈ ವೇಳೆ ಹೆಡ್ ಕಾನ್ ಸ್ಟೇಬೆಲ್ ಗುರುಮೂರ್ತಿ ಗೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವೇಳೆ ಚೌಕ್ ಠಾಣೆ PI ರಾಘವೇಂದ್ರ ಸುಪ್ರೀತನ ಎಡಗಾಲಿಗೆ ಫೈರಿಂಗ್ ಮಾಡಿದ್ದಾರೆ.

ಗಾಯಾಳು ಸುಪ್ರೀತ್ ನನ್ನ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೆರ್ ಸೆಂಟರ್ ಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net