

ಕಲಬುರಗಿ: ಸೇಡಂ ಪಟ್ಟಣದ ಪ್ರಮುಖ ಉದ್ಯಮಿಯೊಬ್ಬರು ಶುಕ್ರವಾರ ಬೆಳಗ್ಗೆ ನಿಗೂಢವಾಗಿ ಕಣ್ಮರೆಯಾಗಿದ್ದು, ಕುಟುಂಬ ವಲಯದಲ್ಲಿ ಆತಂಕ ಮನೆಮಾಡಿದೆ.
ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಹರಿಯುವ ನದಿಯ ಪಕ್ಕದಲ್ಲಿ ಉದ್ಯಮಿ ಶಾಮರಾವ ಊಡಗಿ (55) ಅವರಿಗೆ ಸೇರಿದ ಬೈಕ್ ಮತ್ತು ಚಪ್ಪಲಿ ದೊರೆತಿದ್ದು, ಅಲ್ಲಿ ಜಿಗಿದಿರಬಹುದು ಎಂಬ ಸಂಶಯದ ಮೇಲೆ ಆಧಾರದ ಮೇಲೆ ಪೊಲೀಸರು ನದಿಯಲ್ಲಿ ಮೀನುಗಾರರು, ಅಗ್ನಿ ಶಾಮಕ ಸಿಬ್ಬಂದಿ ನೆರವಿನೊಂದಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬೆಳಗ್ಗೆಯಿಂದ ಹರಿಯುವ ನದಿಯಲ್ಲೆ ಪತ್ತೆ ಕಾರ್ಯ ನಡೆದಿದ್ದು, ಮಳಖೇಡ ಪಿಎಸ್ಐ ಶಿವಶಂಕರ ಸಾಹು, ಸೇಡಂ ಪಿಎಸ್ಐ ಸುಶೀಲಕುಮಾರ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.