

ಕಲಬುರಗಿ: ನಮ್ಮ ಭಾಗದ ಪ್ರಮುಖ ಆಹಾರವಾಗಿರುವ, ರಾಜ್ಯ ಸೇರಿ ಅಂತಾರಾಷ್ಟಿçಯ ಮಟ್ಟದಲ್ಲಿ ಬೇಡಿಕೆ ಇರುವ ರೊಟ್ಟಿಗೆ ಬ್ರಾÈಂಡ್ ರೂಪ ಕಲ್ಪಿಸಿ, ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವ `ಕಲಬುರಗಿ ರೊಟ್ಟಿ ಬ್ರಾÈಂಡ್, ಸಿರಿಧಾನದ ಶಕ್ತಿ' ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದರು.
ನಗರದ ಜಿ¯್ಲÁಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿ¯್ಲÁಡಳಿತ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಬುರಗಿ ರೊಟ್ಟಿ ಬ್ರಾö್ಯಂಡ್‌ಗೆ ಚಾಲನೆ ನೀಡಿ ಮಾತನಾಡಿ, ರೊಟ್ಟಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಬ್ರಾÈಂಡಿAಗ್ ಮಾಡುತ್ತಿದ್ದು, ರೊಟ್ಟಿ ತಯಾರಿಸುವ ಮಹಿಳೆಯರ ಆದಾಯ ವೃದ್ಧಿಗೆ ಪೂರಕವಾಗಿದೆ ಎಂದರು.
ನಗರ ನಿವಾಸಿಗಳು ಸಿರಿಧಾನ್ಯ, ಸಾಂಪ್ರದಾಯಿಕ ರೊಟ್ಟಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಸೂಕ್ತ ಬ್ರಾÈಂಡಿAಗ್, ಪೂರೈಕೆ ಇಲ್ಲದಕ್ಕೆ ಸಮಸ್ಯೆ ಆಗುತ್ತಿದೆ. ಜಿಲ್ಲೆಯಲ್ಲಿ ಲಕ್ಷ ಟನ್ ಜೋಳ ಬೆಳೆಯುತ್ತಿದ್ದು, ಅದನ್ನು ರೊಟ್ಟಿ ತಯಾರಿಸಿ ಮಾರಬೇಕಿದೆ. ಮಹಿಳಾ ಸ್ವ ಸಹಾಯ ಸಂಘದವರು ರೊಟ್ಟಿಯನ್ನು ಹೊಟೇಲ್, ಖಾನಾವಳಿಗೆ ಮಾರುತ್ತಿದ್ದು, ಒಂದೇ ವೇದಿಕೆಯಡಿ ಎಲ್ಲರನ್ನು ಕರೆತಂದು ಖರೀದಿದಾರರೊಂದಿಗೆ ಒಪ್ಪಂದ ಮಾಡಿಸಲಾಗುತ್ತಿದೆ ಎಂದರು.
ರೊಟ್ಟಿ ತಯಾರಕರ ಸಂಘ, ಹೋಟೆಲ್ ಮಾಲೀಕರ ಸಂಘ ಮತ್ತು ಮಂಜುನಾಥ ಫುಡ್ ಪ್ರೊಡಕ್ಟ್, ಸಪ್ತಗಿರಿ ಹೊಟೇಲ್ ಸಮೂಹದ ಮಧ್ಯೆ ರೊಟ್ಟಿ ಬ್ರಾÈಂಡ್ ವಹಿವಾಟಿಗೆ ಒಪ್ಪಂದ ಪತ್ರ ವಿನಿಮಯ ಮಾಡಿಕೊಳ್ಳಲಾಯಿತು.
ಕೃಷಿ ನಿರ್ದೇಶನಾಲಯ ಯೋಜನೆಯಡಿ ಕುಸನೂರ ಗ್ರಾಮದ ಮಹಾದೇವಿ ಬಸಣ್ಣ ಅವರಿಗೆ ೬ ಲP್ಷÀ ರೂ.ನಲ್ಲಿ ೩ ಲP್ಷÀ ರೂ.ªನ ಸಹಾಯಧನದ ರೊಟ್ಟಿ ತಯಾಯಾರಿಕೆ ಯಂತ್ರ ವಿತರಿಸಲಾಯಿತು. ಡಿಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್‌ಪಿ ಅಕ್ಷಯ ಹಾಕೆ, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಇತರರಿದ್ದರು.