ಕಲಬುರಗಿ ಬಂದ್: ಲಾರಿ ಗಾಜು ಪುಡಿ ಪುಡಿ

Screenshot_2024-12-24-10-21-34-01_6012fa4d4ddec268fc5c7112cbb265e7
Published on

ಕಲಬುರಗಿ: ಡಾ.ಬಿ ಆರ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್ ಹಿನ್ನಲೆ ಕಲಬುರಗಿ ನಗರದಾದ್ಯಂತ ವಾಹನ ಸವಾರರ ಪರದಾಟ ಮುಂದುವರಿದಿದ್ದು, ಲಾರಿಯ ಗ್ಲಾಸ್ ಗೆ ಬಡಿಗೆಗಳಿಂದ ಹೊಡೆದು ಗ್ಲಾಸ್ ಪುಡಿ ಪುಡಿ ಮಾಡಿದ ಘಟನೆ ನಡೆದಿದೆ.

ಕಲಬುರಗಿಯ ಹೊರವಲಯದ ಬೇಲೂರ್ ಕ್ರಾಸ್ ಬಳಿ ನಡೆದ ಘಟನೆ ನಡೆದಿದ್ದು, ಬಂದ್ ಇದ್ರು ರಸ್ತೆಗೆ ಬರ್ತಿರಾ ಅಂತಾ ಲಾರಿ ಚಾಲಕನಿಗೆ ಅವಾಜ್ ಹಾಕಿದ ಉದ್ರಿಕ್ತರು ಗ್ಲಾಸ್ ಗೆ ಬಡಿಗೆಯಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net