ನೊಂದ ಕೈ ಶಾಸಕರು ಹಲವರಿದ್ದಾರೆ

Advisor to Chief Minister BR Patil
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್
Published on

ಕಲಬುರಗಿ: ನನ್ನ ಹೇಳಿಕೆ ಸರಿಯಾಗಿದೆ ಎಂದು ರಾಜು ಕಾಗೆ ಹೇಳಿದ್ದಾರೆ. ನನಗೂ ಮೊದಲೇ ಆರು ತಿಂಗಳ ಹಿಂದೆಯೇ ಶಾಸಕಾಂಗ ಸಭೆಯಲ್ಲಿ ಏನು ಹೇಳಬೇಕು ಅದನ್ನು ಹೇಳಿದ್ದಾರೆ. ಇನ್ನೂ ಹಲವರು ಇದರ ಬಗ್ಗೆ ಮಾತನಾಡುವವರಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ ನಲ್ಲಿ ಹಲವು ಅಸಮಾಧಾನ ಶಾಸಕರಿದ್ದಾರೆ ಎಂದು ಬಿ.ಆರ್​.ಪಾಟೀಲ್​ ಹೇಳಿಕೆ ನೀಡಿದರು.

ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕದನ ಭೂಮಿಯಿಂದ ಓಡಿ ಹೋಗುವನಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ರಾಜೀವ್​ ಗಾಂಧಿ ವಸತಿ ನಿಗಮದ ಹಗರಣದ ಆರೋಪದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

೨೫ರಂದು ಸಿಎಂ ಬರಲು ಹೇಳಿದ್ದಾರೆ: ಸಿಎಂ ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತ. ಹಿಂದೇ ಯಾವ ರೀತಿ ಪ್ರೀತಿಯಿಂದ ಇದ್ದರೋ, ಈಗಲೂ ಅದೇ ರೀತಿಯ ಪ್ರೀತಿಯಿಂದ ಇದ್ದಾರೆ. ನನಗೆ ಕರೆ ಮಾಡಿ, ರಾಯಚೂರು ಬರಲು ಹೇಳಿದರು. ಆದರೆ, ಅಲ್ಲಿ ಆಹ್ವಾನವಿಲ್ಲ ನಾನು ಬರಲ್ಲ ಎಂದು ಹೇಳಿದ್ದೇನೆ. ಅದಕ್ಕೆ, ದೆಹಲಿ ಹೋಗಿ ಬರುತ್ತೇನೆ. ಆಗ ಬಂದು ಭೇಟಿ ಆಗಲು ಹೇಳಿದ್ದಾರೆ. ಜೂನ್​ ೨೫ ರಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net