

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಸಂವಿಧಾನ ಉಳಿಸಿ ಸಂಘಟನೆ ಕರೆ ನೀಡಿದ ಕಲಬುರಗಿ ಬಂದ್ ಗೆ ಬೆಳಗ್ಗೆ 6ರಿಂದಲೇ ಆರಂಭವಾಗಿದ್ದು, ಹೋರಾಟಗಾರರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.ನಗರದ ಕೇಂದ್ರ ಬಸ್ ನಿಲ್ದಾಣ, ಹೀರಾಪುರ ವೃತ್ತ, ರಾಮ ಮಂದಿರ ವೃತ್ತ, ಜಗತ್ ವೃತ್ತ, ಜೇವರ್ಗಿ ವೃತ್ತ, ಹುಮನಾಬಾದ್ ವೃತ್ತ ಸೇರಿದಂತೆ ನಗರದ ಸುಮಾರು 17ಕ್ಕಿಂತ ಹೆಚ್ಚಿನ ವೃತ್ತಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿದ್ದು, ಐದು ಗಂಟೆಯಿಂದಲೇ ಪೊಲೀಸರು ರಸ್ತೆಗೆ ಇಳಿದು, ಬಂದೋಬಸ್ತ್ ಕೈಗೊಂಡಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
ಪರದಾಡಿದ ಸಾರ್ವಜನಿಕರು : ಬೆಳಗ್ಗೆ ಬೇರೆ ಬೇರೆ ಊರುಗಳಿಂದ ಬಂದ ಸಾರ್ವಜನಿಕರು ಆಟೋ ಸೇರಿದಂತೆ ಸಂಚಾರಿ ವಾಹನಗಳು ಸಿಗದೇ ಪಡೆದರು.
ಕಾಲ್ನಡಿಗೆಯಲ್ಲಿ ನಗರದ ಅಥವಾ ಪ್ರಯತ್ನ ಮುಂದುವರಿದಿತ್ತು. ಇರುವ ಕೆಲವೊಂದು ಆಟೋಗಳು ದುಪ್ಪಟ್ಟು ಪ್ರಯಾಣದ ತೆಗೆದುಕೊಳ್ಳುವುದು ಕಂಡುಬಂತು.