

ಕಲಬುರಗಿ: ಉಡಾನ್ ಯೋಜನೆ ಅಡಿ ಪ್ರಾರಂಭವಾದ ಕಲಬುರಗಿ ವಿಮಾನ ನಿಲ್ದಾಣದಿಂದ ನಿತ್ಯ ಬೆಂಗಳೂರಿಗೆ ವಿಮಾನ ಸಂಚಾರ ಪ್ರಾರಂಭವಾಗಿರುವುದಕ್ಕೆ ದಕ್ಷಿಣ ಕನ್ನಡ ಸಂಘ ಹರ್ಷ ವ್ಯಕ್ತಪಡಿಸಿದ್ದು, ಮಂಗಳೂರಿಗೂ ವಿಮಾನ ಸಂಚಾರ ಶೀಘ್ರ ಶುರು ಮಾಡಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ, ನಿತ್ಯ ಸಂಚರಿಸುತ್ತಿದ್ದ ವಿಮಾನ ಹಾರಾಟ ಕಡಿತಗೊಳಿಸಿದ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದ್ದರು. ಇದೀಗ ನಿತ್ಯ ಸಂಚಾರ ಶುರು ಮಾಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಭಿವೃದ್ಧಿಗೂ ನೆರವಾಗಲಿದೆ. ಕಲಬುರಗಿ- ಮಂಗಳೂರು ಮಧ್ಯೆ ಬೆಂಗಳೂರು ಮಾರ್ಗವಾಗಿ ವಿಮಾನ ಸಂಚಾರ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿz್ದÁರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿAಗ್ ಮಾಡಲು ಭಾರತೀಯ ವಿಮಾನಯಾನ ಪ್ರಾಧಿಕಾರ ಗ್ರೀನ್‌ಸಿಗ್ನಲ್ ನೀಡಿ ತಿಂಗಳು ಕಳೆದಿದೆ. ಮಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಹೊಂದಿದೆ. ಹಗಲು ಹೊತ್ತಿನಲ್ಲಿ ವಿಮಾನ ಇಳಿಯಲು ಅನುಕೂಲಕರ ಸಮಯ ಇಲ್ಲದಿರುವುದರಿಂದ ರಾತ್ರಿ ವೇಳೆ ವಿಮಾನ ಸಂಚಾರ ಸುಗಮವಾಗಿ ಪ್ರಾರಂಭಿಸಲು ಅವಕಾಶದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳ ಜತೆ ಮಾತುಕತೆ ನಡೆಸಿದೆ. ಮೂರು ತಿಂಗಳೊಳಗೆ ರಾತ್ರಿ ಸಂಚಾರ ಪ್ರಾರಂಭಿಸುವುದಾಗಿ ಮಾಹಿತಿ ಇದ್ದು, ತP್ಷÀಣದಲ್ಲಿ ಪ್ರಾರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ . ಕಲಬುರಗಿಯಿಂದ ನಿತ್ಯ ಆರು ಖಾಸಗಿ ಬಸ್ಸುಗಳು ಮಂಗಳೂರಿಗೆ ಸಂಚರಿಸುತ್ತಿವೆ. ಈ ಭಾಗದಿಂದ ಶಿP್ಷÀಣ, ವ್ಯಾಪಾರ, ಪ್ರವಾಸಕ್ಕಾಗಿ ಕರಾವಳಿ ಮತ್ತು ಪಕ್ಕದ ಕೇರಳದ ಕಣ್ಣೂರು, ಕಲ್ಲಿಕೋಟೆ ಇತರೆಡೆ ಕಲ್ಯಾಣ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟçದ ಗಡಿ ಜಿ¯್ಲೆಗಳಿಂದ ಜನ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಮಂಗಳೂರಿಗೆ ವಿಮಾನ ಸಂಚಾರ ಪ್ರಾರಂಭಿಸಬೇಕು. ಈ ಬೇಡಿಕೆ ಕುರಿತು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಮತ್ತು ಮಂಗಳೂರು ಸಂಸದರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.