ಕಲಾ ಸುಜಯದಿಂದ ಶಾಸ್ತ್ರೀಯ ನೃತ್ಯ

IMG_20250209_203726_255.jpg
Published on

ಹುಬ್ಬಳ್ಳಿ: ಇಲ್ಲಿಯ ಕಲಾ ಸುಜಯ ದಶಕದ ಸಂಭ್ರಮ ಕಾರ್ಯಕ್ರಮ ಭಾನುವಾರ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಸಡಗರದಿಂದ ನಡೆಯಿತು.

ದಶಮಾನೋತ್ಸವ ಹಿನ್ನೆಲೆಯಲ್ಲಿ ಈ ವರೆಗೆ ತಿಂಗಳಿಗೊಂದರಂತೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷದ 9ನೇ ಕಾರ್ಯಕ್ರಮದಲ್ಲಿ ಭಾನುವಾರ ಮೈಸೂರಿನ ಒಡಿಸ್ಸಿ ನೃತ್ಯಗಾರ್ತಿ ವಿದುಷಿ ಅನುಶ್ರೀ ಪದ್ಮನಾಭ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನಗೊಂಡಿತು.
ಅರ್ಧನಾರೀಶ್ವರ ರಿತ್ವಿಕ್ ವೆಂಕಟ್ ಅವರಿಂದ ಕೂಚಿಪುಡಿ ನೃತ್ಯ ನಡೆಯಿತು. ಶಿವ ಪಾರ್ವತಿಯರ ಸಮ್ಮಿಲನದ ಅನುಭೂತಿ ಮತ್ತು ಅರ್ಧನಾರೀಶ್ವರರ ಅವಿನಾಭಾವ ಸಂಬಂಧದ ವಿವರಣೆ ಪ್ರದರ್ಶಿಸಲಾಯಿತು.

ಕಲಾ ಸುಜಯ ಮುಖ್ಯಸ್ಥ ವಿದ್ವಾನ್ ಸುಜಯ ಶಾನಭಾಗ ಅವರು ಭರತನಾಟ್ಯ ಪ್ರಸ್ತುತಿಯಲ್ಲಿ ಭಗವದ್ ಭಕ್ತಿಯ ಮತ್ತು ರಾಷ್ಟ್ರಭಕ್ತಿಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು.

ದೆಹಲಿಯ ಭಾರತೀಯ ನೃತ್ಯ, ಸಂಗೀತ ಸಭಾದ ಅಧ್ಯಕ್ಷ ರಾಣೇಶ ಪೆರಂಬ, ಹುಬ್ಬಳ್ಳಿಯ ಕಲಾ ಪೋಷಕ ವಿಕ್ರಂ ಶಿರೂರ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net