ಸಂಗೀತಕ್ಕಿದೆ ಔಷಧದ ಶಕ್ತಿ

1002Klb11
Published on

ಕಲಬುರಗಿ: ಸಂಗೀತಕ್ಕೆ ಔಷಧದ ಶಕ್ತಿ ಇದ್ದು, ಮಾನಸಿಕ ನೆಮ್ಮದಿ ಜತೆಗೆ ದೈಹಿಕ ರೋಗಗಳನ್ನು ನೀಗಿಸುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಹಾಗೂ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜಾನಪದ, ತತ್ವ ಪದಕಾರರು ನಮ್ಮ ಇತಿಹಾಸ ಹಾಗೂ ನಡೆ ನುಡಿಗಳನ್ನು ಸಂಗೀತದ ಮೂಲಕ ವರ್ಣಿಸಿದ್ದಾರೆ. ಸಂಗೀತ ಆಲಿಕೆ ಹಲವು ರೋಗಗಳು ನಿವಾರಣೆ ಆಗುತ್ತವೆ ಎಂಬುದು ಸಂಶೋಧನೆಗಳಿAದ ಸಾಬೀತಾಗಿದೆ ಎಂದರು.

ಅಜಲಪುರದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಸಂಗೀತಕ್ಕೆ ಕಟ್ಟಳೆಗಳಿಲ್ಲ. ಎಲ್ಲರಿಗೂ ಸಮನಾಗಿ ಕಾಣುವ ಮೂಲಕ ಶ್ರೀಗುರು ಪುಟ್ಟರಾಜ ಗವಾಯಿಗಳು ಸಂಗೀತ ಧಾರೆ ಎರೆದಿದ್ದಾರೆ. ವಿಶೇಷ ಚೇತನರ ಬಾಳಿಗೆ ಕಾಮಧೇನು ಆಗಿದ್ದಾರೆ ಎಂದು ಹೇಳಿದರು.

ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಸಾಪ ಜೇವರ್ಗಿ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶಿವಶರಣಪ್ಪ ಕೋಬಾಳ, ದೂರದರ್ಶನದ ನಿವೃತ ಅಧಿಕಾರಿ ಸದಾನಂದ ಪೆರ್ಲಾ, ಕಲ್ಯಾಣಕುಮಾರ ಸಂಗಾವಿ, ನೀಲಕಂಠ ಎಂ. ಜಮಾದಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಶಂಕರ ಹೂಗಾರ, ಪಂಚಪೀಠ ವಾರ್ತಾಧಿಕಾರಿ ಸಿದ್ರಾಮಪ್ಪ ಅಲಗೂಡಕರ್, ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಅಧ್ಯಕ್ಷ ಬಾಬುರಾವ ಕೋಬಾಳ, ಚೇತನ್ ಕೋಬಾಳ ಇತರರಿದ್ದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದ ಸಾಧಕರಾದ ಬ್ರಹ್ಮಾನಂದ ಅರಳಿ, ಚಂದ್ರಶೇಖರ ಮಡಿವಾಳ, ಧರ್ಮರಾಜ ಹೇರೂರ, ಡಾ.ಎಸ್‌ಎಸ್ ಪಾಟೀಲ್, ಓಂ ಪ್ರಕಾಶ ಬರಸಾನೂರಮಠ, ಶಿವರಾಜ ಬಸವರಾಜ ಮುರಡಿ, ರಾಜಶೇಖರ ಹಡಪದ ವಿಜಯಕುಮಾರ ಸಾಲಿಮಠ, ವಿಶ್ವನಾಥ ಸಾಹು, ಜ್ಯೋತಿ ಹಂಚಾಟೆ ಸೇರಿ ಹಲವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net