

ಮಂಗಳೂರು : ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ಫೆ.8ರಂದು ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ವರ ಸಾನಿಧ್ಯ ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ
ವಿಭಾ.ಎಸ್.ನಾಯಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 8.40ಕ್ಕೆ ವಿಭಾ .ಎಸ್.ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬ್ಲಾದಲ್ಲಿ ವ್ನಿೇಶ್ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ. 9.40ಕ್ಕೆ ಮೂಡುಬಿದಿರೆಯ ಸ್ವಯಂಪ್ರಕಾಶ್ ಪ್ರಭು ಇವರಿಂದ ಕೊಳಲು ವಾದನ, 10.40ಕ್ಕೆ ಆತ್ರೇಯಾ ಗಂಗಾಧರ್ ಅವರಿಂದ ಗಾಯನ, 11.40ಕ್ಕೆ ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸಾಯಂಕಾಲ 5ಕ್ಕೆ ಹಿಂದೂಸ್ತಾನಿ ಸಂಗೀತ ಕಛೇರಿ ಉದ್ಘಾಟನೆ ನಡೆಯಲಿದೆ. 5.45ಕ್ಕೆ ಧಾರವಾಡದ ಬಸವರಾಜ ವಂದಲಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ, 7.15ಕ್ಕೆ ಕೋಲ್ಕತ್ತಾದ ಅರಣ್ಯ ಚೌಧರಿ ಅವರಿಂದ ಸಂತೂರ್ ವಾದನ ಕಛೇರಿ ನಡೆಯಲಿದೆ.
ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಸಹಭಾಗಿತ್ವದಲ್ಲಿ ನಡೆಯುವ ಈ ಸಂಗೀತೋತ್ಸವಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಅವರು ತಿಳಿಸಿದರು.
ಕಲಾ ಸಾಧನ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ ನಾಯಕ್ ಇಂದಾಜೆ, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲೆ
ಡಾ.ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು.