ಲಸಿಕೆ ಕಡ್ಡಾಯ ಸರಿಯಲ್ಲ: ಡಾ.ಶ್ರೀನಿವಾಸ ಕಕ್ಕಿಲ್ಲಾಯ ಆಕ್ಷೇಪ

kakkilaya new
Published on

ಮಂಗಳೂರು: ಕೋವಿಡ್ ಲಸಿಕೆ ಹಾಕದವರ ಮೇಲೆ ಕ್ರಮ ಜರಗಿಸಲಾಗುವುದು, ಲಸಿಕೆ ಹಾಕದವರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಂತಿಲ್ಲ ಎಂದು ಮನಪಾ ಆಯುಕ್ತರು, ಜಿಲ್ಲಾಧಿಕಾರಿಯವರು ಆದೇಶ ನೀಡಿರುವುದು ಸರಿಯಲ್ಲ. ಹಾಗಾಗಿ ಆದೇಶವನ್ನು ಹಿಂಪಡೆಯಬೇಕು ಎಂದು ಮಂಗಳೂರಿನ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇಂತಹ ಆದೇಶಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ರೂಪಿಸಿರುವ ನೀತಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವೆಂದು ಕೇಂದ್ರ ಸರ್ಕಾರವು ಹಲವು ಸಲ ಅತಿ ಸ್ಪಷ್ಟವಾಗಿ ತಿಳಿಸಿದ್ದು, ಅನೇಕ ಉಚ್ಚ ನ್ಯಾಯಾಲಯಗಳಲ್ಲಿ ಅದನ್ನೇ ಸ್ಪಷ್ಟಪಡಿಸಿ ಹೇಳಿಕೆಗಳನ್ನು ಸಲ್ಲಿಸಿದೆ. ಹಾಗಾಗಿ ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಡಾ.ಕಕ್ಕಿಲ್ಲಾಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net