

ಕಕ್ಕೇರಾ: ನಮ್ಮ ವ್ಯಕ್ತಿತ್ವ ವಿಕಾಸಕ್ಕಾಗಿ ಹೆಚ್ಚು ಹೆಚ್ಚು ಪುಸ್ತಕ ಓದಬೇಕು ಎಂದು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಹೇಳಿದರು.
ಪಟ್ಟಣದ ಕಕ್ಕಯ್ಯನ ದೇವಸ್ಥಾನದಲ್ಲಿ ಬಸವ ಸೇವಾ ಸಮಿತಿ ಹಾಗೂ ಬೆಂಗಳೂರಿನ ಜನಸ್ನೇಹಿ ಸಂಸ್ಥೆಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಶ್ರಾವಣ ಸಂಭ್ರಮ ಕಾರ‍್ಯಕ್ರಮದಲ್ಲಿ ಶಾಮಲಿಂಗ ಜವಳಗಿ ಅವರ ಭಕ್ತಿಸಾಗರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ವ್ಯಕ್ತಿತ್ವ ವಿಕಸನದ ಜತೆಗೆ ನಮ್ಮ ಜೀವನದ ಗುರಿ ಮತ್ತು ಉದ್ದೇಶ ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಲಬುರಗಿ ಶರಣ ಸಂಸ್ಕೃತಿ ದೃಶ್ಯ ಕಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎ.ಎಸ್.ಪಾಟೀಲ್ ಕರ‍್ಯಕ್ರಮ ಉದ್ಘಾಟಿಸಿದರು. ದೇವಿಂದ್ರಪ್ಪ-ಚಂದ್ರಕಲಾ ದಂಪತಿ ಷಟಸ್ಥಲ ಧ್ವಜಾರೋಹಣ ಮಾಡಿದರು. ಪರಮಣ್ಣ-ರೂಪಾ ದಂಪತಿ ವಿಶ್ವಗುರು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಯ್ಯಣ್ಣಪ್ಪ ಪೂಜಾರಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಮಹಾದೇವ ಗೋಳ, ಬಸಣ್ಣ ಸಜ್ಜನ್, ಶರಣಪ್ಪ ಯಾಳವಾರ, ರಾಜು ಕುಂಬಾರ, ಅನೀಲ ಹುಟಗಿ, ವಿಶ್ವನಾಥ ಮಂಗಲಗಿ, ಸಂಗನಗೌಡ ಹಗರಟಗಿ, ಕೆ.ಗವಿಸಿದ್ದೇಶ ಹೊಗರಿ, ಕೆಂಚಪ್ಪ ಕಟ್ಟಿಮನಿ, ಭಾರತಿ ಪುರಾಣಿಕ ಮಠ, ಶರೀಫ್ ತಾತಾ ಇತರರಿದ್ದರು.
ಜನಸ್ನೇಹಿ ಸಂಸ್ಥಾಪಕ ಶಾಮಲಿಂಗ ಜವಳಗಿ ಸಂವಿಧಾನ ಪೀಠಿಕೆ ಓದಿದರು. ಗಾಯಕ ಬಿ.ಪಿ.ರೇಣುಕಪ್ಪ ವಚನ ಪ್ರಾರ್ಥನೆ ಮಾಡಿದರು. ಭಾಗಣ್ಣ ಹಗರಟಗಿ ಪ್ರಾಸ್ತಾವಿಕ ಮಾತನಾಡಿದರು. ಬಸಯ್ಯ ಸ್ವಾಮಿ ಸ್ವಾಗತಿಸಿದರು. ಮಹಾಂತೇಶ ಮುರಾಳ ವಚನ ಗಾಯನ ಮಾಡಿದರು. ನಂದಯ್ಯಸಾಮಿ ವಂದಿಸಿದರು. ನೀಲಮ್ಮ ಅಂಗಡಿ ನಿರೂಪಣೆ ಮಾಡಿದರು.