ದೇವಿ ಪೂಜೆಯಿಂದ ಮನಸ್ಸಿಗೆ ನೆಮ್ಮದಿ

21-10KKR-01
ಕಕ್ಕೇರಾದಲ್ಲಿ ನಡೆಯುತ್ತಿರುವ ದೇವಿ ಪುರಾಣ ಕಾರ‍್ಯಕ್ರಮದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಯುವ ಮುಖಂಡ ರಾಜಾ ವಿಜಯಕುಮಾರ ನಾಯಕ ಅವರನ್ನು ಶ್ರೀ ನಂದಣ್ಣಪ್ಪ ಪೂಜಾರಿ ಸನ್ಮಾನಿಸಿದರು. ಬಸಯ್ಯಸ್ವಾಮಿ, ರಾಜು ಹವಾಲ್ದಾರ್, ಗುಂಡಪ್ಪ ಸೊಲಾಪುರ ಇತರರಿದ್ದರು.
Published on

ಕಕ್ಕೇರಾ: ಪ್ರತಿನಿತ್ಯ ದೇವಿಯನ್ನು ಆರಾಧಿಸಿ ಪೂಜಿಸುವುದರಿಂದ ದುಷ್ಟ ವಿಚಾರಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಕಾಂಗ್ರೆಸ್ ಯುವ ಮುಖಂಡ ರಾಜಾ ವಿಜಯಕುಮಾರ ನಾಯಕ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡ ದೇವಿ ಪುರಾಣ ಕಾರ‍್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅದ್ದೂರಿಯಾಗಿ ದೇವಿ ಪುರಾಣ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬರು ಧರ್ಮದಿಂದ ನಡೆದು, ಶರಣ-ಸಂತರ ಪುರಾಣ ಆಲಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀ ನಂದಣ್ಣಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ದಸ್ತಗೀರ್‌ಸಾಹೇಬ್ ಶ್ಯಾನಿ ಪೂಜಾರಿ, ಅಲ್ಲಾಭಕ್ಷ ಪೂಜಾರಿ, ಅಪ್ಪಣ್ಣ ಬಡಿಗೇರ, ಹಣಮಂತ್ರಾಯ ಗುರಿಕಾರ, ಗುಂಡಪ್ಪ ಸೊಲ್ಲಾಪುರ, ರಾಜು ಹವಾಲ್ದಾರ್, ದೇವಿಂದ್ರಪ್ಪ ಬಳಿಚಕ್ರ, ಬಸಯ್ಯಸ್ವಾಮಿ, ಚಂದ್ರು ವಜ್ಜಲ್, ಸೋಮನಾಥ ಸೊಲ್ಲಾಪುರ, ನಿಂಗಣ್ಣ ಗುರಿಕಾರ, ಶರಣಕುಮಾರ ಸೊಲ್ಲಾಪುರ, ಶಿವಪ್ಪ ಜಾಲಹಳ್ಳಿ, ಜಗದೇವ ಶಿವಪೂಜಿ, ಶರಣಯ್ಯಸ್ವಾಮಿ, ಮಹಾಂತೇಶ ಕಂಠಿಮಠ ಇದ್ದರು. ಪುರಾಣಿಕ ಬಸಯ್ಯ ಶಾಸ್ತ್ರಿ ಲಕ್ಷ್ಮೀಯ ಅವತಾರ ತಿಳಿಸಿದರು. ವಿನೋದಕುಮಾರ ಸಂಗೀತ ನಡೆಸಿಕೊಟ್ಟರು. ಮಲ್ಲಿಕಾರ್ಜುನ ತಬಲಾ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net