ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದೆ

24-11KKR-01
ಕಕ್ಕೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದೆ ಕಕ್ಕೇರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು.
Published on

ಕಕ್ಕೇರಾ: ಸಾಮಾನ್ಯವಾಗಿ ಪ್ರತಿ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರಹಾಕಲು ಪ್ರತಿಭಾ ಕಾರಂಜಿಯಂಥ ಕರ‍್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಸಾಹಿತಿ ಸೂರುಗೇಶ ವಾರದ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ತಾಲೂಕು ಅಲ್ಲದೆ ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಮಿಂಚಿ ಪಟ್ಟಣದ ಕೀರ್ತಿ ಹೆಚ್ಚಿಸಬೇಕು ಎಂದು ಕಿವಿ ಮಾತು ಹೇಳಿದರು.

ಸಿಆರ್‌ಪಿ ಶಿವಲೀಲಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸುವ ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಪ್ರಾಮಾಣಿಕವಾಗಿ ಗುರುತಿಸಬೇಕು ಹೇಳಿದರು.

ಅಯ್ಯಣ್ಣಪ್ಪ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ದೇವಿಂದ್ರಪ್ಪ ಬಳಿಚಕ್ರ, ಶರಣಕುಮಾರ ಸೊಲ್ಲಾಪುರ, ಡಾ.ವೀಣಾ ಚಟ್ಟರಕಿ, ಹೊನ್ನಪ್ಪ ಹಾದಿಮನಿ, ಕೆ.ಗವಿಸಿದ್ದೇಶ ಹೊಗರಿ, ಶಿವಕುಮಾರ ಹಿರೇಮಠ, ಮಂಜುನಾಥ ಅಸ್ಕಿ, ಬಸವರಾಜ ಗುತ್ತೇದಾರ್, ತಿಪ್ಪಣ್ಣ ಜಂಪಾ, ಅಮರೇಶ ಕಾನಗುಂಡಿ ಇದ್ದರು.

ವಿದ್ಯಾರ್ಥಿಗಳು ಭರತನಾಟ್ಯ, ಛದ್ಮವೇಶ, ಜಾನಪದ ನೃತ್ಯ, ಕವ್ವಾಲಿ, ರಸಪ್ರಶ್ನೆ, ಗಝಲ್, ಮಿಮಿಕ್ರಿ, ಕೋಲಾಟ, ವೈಯಕ್ತಿಕ ಆಟೋಟ ಸೇರಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಮನೋಹರ ಕುಲಕರ್ಣಿ ಸ್ವಾಗತಿಸಿದರು. ರಂಜಾನ ಲೋಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net