ಕಕ್ಕೇರಿ ಬಿಷ್ಠಾದೇವಿ ಜಾತ್ರೆ ಸಂಪನ್ನ

web1
ಕಕ್ಕೇರಿಯ ಶ್ರೀ ಬಿಷ್ಠಾದೇವಿಯ ಸಹೋದರಿ ಮೂಕಮ್ಮದೇವಿಯ ಪಾದ ಕಟ್ಟೆಯ ಮೇಲೆ ಭಕ್ತರು ಉಪ್ಪು ಹಾಕುತ್ತಿರುವುದು.
Published on

ಕಕ್ಕೇರಿ: ಗ್ರಾಮ ದೇವತೆ ಶ್ರೀಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿಯ ಜಾತ್ರಾ ಮಹೋತ್ಸವ ಭಕ್ತರ ಹರಕೆ ಮತ್ತು ಸೇವೆಯ ನಡುವೆ ಶುಕ್ರವಾರ ಸಂಪನ್ನಗೊಂಡಿತು.

ಪ್ರತಿವರ್ಷ ಮೂರು ದಿನ ನಡೆಯುವ ಜಾತ್ರೆ ಇದೇ ಮೊದಲ ಬಾರಿಗೆ 8 ದಿನ ನಡೆಯಿತು. ಕಳೆದ ಶುಕ್ರವಾರದಿಂದ ಪ್ರಾರಂಭಗೊಂಡಿದ್ದ ಜಾತ್ರೆಗೆ ದಿನನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿಯರಿಗೆ ಉಡಿ ತುಂಬಿ ಆಶೀರ್ವಾದ ಪಡೆದರು. ದೇವಸ್ಥಾನದ ಎದುರಿನಲ್ಲಿ ಇರುವ ಬಿಷ್ಠಾದೇವಿಯ ಸಹೋದರಿ

ಮೂಕಮ್ಮದೇವಿಯ ಆಲಯದಲ್ಲಿ ಸಾಕು ಪ್ರಾಣಿಗಳು ಹಾಗೂ ಚಿಕ್ಕ ಮಕ್ಕಳ ತೊಂದರೆ ಹಾಗೂ ಚರ್ಮರೋಗ ನಿವಾರಣೆಗೊಸ್ಕರ ದೇವಿಯ ಪಾದುಕಟ್ಟೆಯ ಮೇಲೆ ಉಪ್ಪು ಅರ್ಪಿಸಿ ಭಕ್ತರು ಪ್ರಾರ್ಥಿಸಿದರು. ನೂರಾರು ಚೀಲ ತೆಂಗಿನಕಾಯಿ, 50 ಕ್ವಿಂಟಾಲ್ ಅಕ್ಕಿ, ಕುಬಸ, ಹಣ, ಬಂಗಾರ, ಬೆಳ್ಳಿ ಸೇರಿ ಹಲವಾರು ಸಾಮಗ್ರಿಗಳು ಭಕ್ತರು ಕಾಣಿಕೆಯಾಗಿ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net