ಕೊಡಗಿನ ಕಕ್ಕಡ ಪದಿನೆಟ್ ಇಂದು

2..npk--,1
ಕಕ್ಕಡ ಪದಿನೆಟ್ ಮದ್ದುಸೊಪ್ಪಿನ ಪಾಯಸ.
Published on

ನಾಪೋಕ್ಲು: ಕೊಡಗಿನ ಜನರ ಕೃಷಿ ಚಟುವಟಿಕೆಯ ಕಕ್ಕಡ ಪದಿನೆಟ್ ಆಚರಣೆ ಆ.3 ರಂದು ಜಿಲ್ಲಾದ್ಯಂತ ಆಚರಿಸಲಾಗುತ್ತದೆ.

ಕನ್ನಡದ ಆಷಾಢ ಎಂಬ ಪದವೇ ಕೊಡವರ ಕಕ್ಕಡ ಹಾಗೂ ತುಳುವರ ಆಟಿ ಆಗಿದೆ. ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅಂದು ಸಂಪ್ರದಾಯದಂತೆ ಸಾಮೂಹಿಕವಾಗಿ ಮನೆಯಲ್ಲಿ ಮದ್ದುಸೊಪ್ಪಿನ ಪಾಯಸ, ವಿವಿಧ ಕಾದ್ಯಿ (ತಿನಿಸು) ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.

ಕಕ್ಕಡ ಪದಿನೆಟ್ ವೈಶಿಷ್ಟವೇ ಮದ್ದುಸೊಪ್ಪಿನ ಪಾಯಸ ಸೇವನೆ. ಆಟಿಸೊಪ್ಪು ಹಸಿರೆಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಉದ್ದನೆಯ ಕಡ್ಡಿಯಲ್ಲಿ ಎಲೆಗಳು ತುಂಬಿರುತ್ತವೆ. ಕಕ್ಕಡ ತಿಂಗಳ ಆರಂಭದ ದಿನದಿಂದ ಹಿಡಿದು ಗಿಡದಲ್ಲಿ ಒಂದೊಂದು ವಿಧದ ಔಷಧೀಯ ಗುಣಗಳು ಸೇರಲಾರಂಭಿಸುತ್ತವೆ ಎನ್ನಲಾಗಿದೆ. 18ನೇ ದಿನದಲ್ಲಿ 18 ವಿಧದ ಔಷಧಗಳು ಸೇರಿ ಸಂರಕ್ಷಕವಾಗುತ್ತದೆ ಎಂಬುದು ಪ್ರತೀತಿ. ಆ ದಿನದಂದು ಮಾತ್ರ ಅದು ಸುವಾಸನೆ ಭರಿತವಾಗಿರುತ್ತದೆ. 18ನೇ ದಿನದಂದು ಕಕ್ಕಡ ಮದ್ದು ಸೊಪ್ಪನ್ನು ತಂದು ಅಕ್ಕಿ ಪಾಯಸ ತಯಾರಿಸಿ ಸವಿಯಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆಯೇ ಮದ್ದುಸೊಪ್ಪಿನ ಸೇವನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಮಳೆಗಾಲದಲ್ಲಿ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಶೀತದಿಂದ ರಕ್ಷಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net