ಕಳ್ಳಭಟ್ಟಿ ಸಾರಾಯಿ, ಪುಳಿಗಂಜಿ ವಶ

16spt4
ಸೋಮವಾರಪೇಟೆ ತಾಲೂಕಿನ ದೊಡ್ಡತೋಳೂರು ಗ್ರಾಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಮತ್ತು ಪುಳಿಗಂಜಿ ವಶಪಡಿಸಿಕೊಂಡು ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲೋಕೇಶ್, ಬಾಲಕೃಷ್ಣ, ಸುಮತಿ, ವಿರೇಶ್ ಇದ್ದಾರೆ.
Published on

ಸೋಮವಾರಪೇಟೆ: ತಾಲೂಕಿನ ವಿವಿಧೆಡೆಗಳಲ್ಲಿ ಅಬಕಾರಿ ಇಲಾಖೆ ವತಿಯಿಂದ ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ಮತ್ತು ಪುಳಿಗಂಜಿ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ದೊಡ್ಡತೋಳೂರು ಗ್ರಾಮದ ಆನಂದ ಎಂಬವರ ಮನೆಯಲ್ಲಿ 9 ಲೀಟರ್ ಪುಳಗಂಜಿ, 200 ಮಿ.ಲೀ ಕಳ್ಳಭಟ್ಟಿ ಸಾರಾಯಿ, ವಿರೂಪಾಕ್ಷ ಎಂಬುವರ ಮನೆಯಲ್ಲಿ 3.5 ಲೀ. ಕಳ್ಳಭಟ್ಟಿ ಸಾರಾಯಿ, 20 ಲೀ. ಬೆಲ್ಲದ ಪುಳಗಂಜಿ ಮತ್ತು ಡಿಸ್ಟಿಲರಿ ಪರಿಕರಗಳನ್ನು ಪತ್ತೆಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು. ಮಾದಪ್ಪ ಎಂಬುವರ ಮನೆಯಲ್ಲಿ 30 ಲೀ. ಪುಳಗಂಜಿ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಇತರ ಪರಿಕರಗಳನ್ನು ವಶಕ್ಕೆ ಪಡೆದು 3 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಬಿ.ಎಸ್.ಲೋಕೇಶ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರಾದ ಬಿ.ಎಸ್.ಬಾಲಕೃಷ್ಣ, ಕೆ.ವಿ.ಸುಮತಿ, ಮುಖ್ಯಪೇದೆ ವಿರೇಶ್, ಸುರೇಶ್, ಸಿಬ್ಬಂದಿ ಈರಣ್ಣ, ಕರಿಯಪ್ಪ, ಮಹಾಂತೇಶ್, ವಾಹನ ಚಾಲಕಿ ದಿವ್ಯಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net