ಬೀದಿ ನಾಯಿ ಹಾವಳಿ ತಡೆಗೆ ಕಾಕತಿ ಗ್ರಾಮಸ್ಥರ ಆಗ್ರಹ

mlk-DOG.-Aug-13.jpg
Published on

ಬೆಳಗಾವಿ: ಬೀದಿನಾಯಿಗಳ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕಿನ ಕಾಕತಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಕಾಕತಿ ಗ್ರಾಮದಲ್ಲಿ ಈಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಓಡಾಡಲು ಭಯಪಡುವ ಸ್ಥಿತಿ ಎದುರಾಗಿದೆ. ಕೆಲವೇ ದಿನಗಳಲ್ಲಿ 20ಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿ ಕಚ್ಚಿದ ಪ್ರಕರಣ ದಾಖಲಾಗಿವೆ. ಇದರಿಂದ ರೇಬಿಸ್​ ಭಯ ಕಾಡುತ್ತಿದೆ. ಆದ್ದರಿಂದ ಬೀದಿ ನಾಯಿಗಳ ಹಾವಳಿ ತಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಪಂ ಸದಸ್ಯ ಗಜಾನನ ಗವಣೆ, ಆಶಿಷ ಗವಣೆ, ಗುರು ಪಿಸೆ, ಮೊಹಮ್ಮದ್​ ಸರ್ಫರಾಜ್​, ಗೌಸ್​ ಸಾನ್ವಾಲೆ, ರಾಜಾರಾಮ ಇಂಜಾಲ್​, ಜಿಯಾನಾ ಹನ್ನೂರಿ, ಸಹೇರಾ ಮೊಮಿನ್​, ಶಬಾನಾ ಸಂವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net