ಕಾಕತಿ ಕನ್ನಡ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿ

IMG-20230808-WA0016.jpg
Published on

ಬೆಳಗಾವಿ : ತಾಲೂಕಿನ ಕಾಕತಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾಕತಿ ಕೇಂದ್ರ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕಾಕತಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ’ ಸಮಗ್ರ ಚಾಂಪಿಯನ್ ಪ್ರಶಸ್ತಿ’ ಪಡೆದು ಮುಡಿಗೇರಿಸಿಕೊಂಡಿದೆ.

ಬಾಲಕರ ಗುಂಪು ಆಟ ವಿಭಾಗದಲ್ಲಿ ರಿಲೇ, ಥ್ರೋ ಬಾಲ್, ವಾಲಿಬಾಲ್ ಮತ್ತು ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಬಾಲಕಿಯರ  ಗುಂಪು ಆಟ ವಿಭಾಗದಲ್ಲಿ ರಿಲೇ, ಯೋಗ ಸ್ಪರ್ಧೆಗಳಲ್ಲಿ  ಪ್ರಥಮ, ಬಾಲಕರ ವೈಯಕ್ತಿಕ ವಿಭಾಗದಲ್ಲಿ 100ಮೀ,600 ಮೀ,ಓಟ,ಎತ್ತರ ಜಿಗಿತ ಮತ್ತು ಕುಸ್ತಿ ಸ್ಪರ್ಧೆಗಳಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ 100ಮೀ,400ಮೀ ಓಟ, ಕುಸ್ತಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಮುಂದಿನ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ವಿ.ಎಂ. ಮಡಿವಾಳರ ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net