ಕಾಕರಗಲ್ ಟೋಲ್ ಸಂಗ್ರಹ ಖಂಡನೀಯ

M.VEERUPAKSHI
M.VEERUPAKSHI
Published on

ರಾಯಚೂರು ರಸ್ತೆಯಲ್ಲಿ ಮೂಲಭೂತ ಸೌಕರ್ಯಒದಗಿಸದೇ ದೇವದುರ್ಗ ತಾಲೂಕಿನ ಕಾಕರಗಲ್ ಟೋಲ್ ಸಂಗ್ರಹ ಪ್ರಾರಂಭವಾಗಿರುವುದು ಖಂಡನೀಯವಗಿದೆAದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಸಂಘಟನೆಗಳ ಪ್ರತಿರೋಧದ ಮಧ್ಯೆ ಟೋಲ್ ಸಂಗ್ರಹ ಪ್ರಾರಂಭಿಸಲಾಗಿದೆ. ರಸ್ತೆಯಲ್ಲಿ ಮೂಲಭೂತ ಸೌಕರ್ಯಒದಗಿಸದೇ ಶುಲ್ಕ ಸಂಗ್ರಹಿಸುತ್ತಿರುವದು ಅವೈಜ್ಞಾನಿಕ ಕ್ರಮವಾಗಿದೆ. ೨೦೧೭ ರಲ್ಲಿ ಟೋಲ್ ಗೇಟ್ ಸಂಗ್ರಹಿಸಲು ಆದೇಶಿಸಿಲಾಗಿದೆ. ಟೆಂಡರ್ ಅವಽ ಪೂರ್ಣಗೊಂಡ ನಂತರ ಟೋಲ್ ಸಂಗ್ರಹ ಪ್ರಾರಂಭಿಸಲಾಗಿದೆ.

ರಸೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಪಾದಚಾರಿ ರಸ್ತೆ, ವಾಹನಗಳ ನಿಲುಗಡೆಗೆ, ಸ್ಥಳೀಯ ಜನರಿಗೆ ರಸ್ತೆಯೇ ನಿರ್ಮಿಸಿಲ್ಲ. ಆದರೂ ಒಂದೇ ರಸ್ತೆಯಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುತ್ತಿರುವದು ನಡೆಯುತ್ತಿದೆ.

ಈ ಕುರಿರು ಪ್ರಾರಂಭದಿAದಲೂ ಟೊಲ್ ಸಂಗ್ರಹಕ್ಕೆ ನಮ್ಮ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರೆ ಸಾರ್ವಜನಿಕರು ಪ್ರತಿರೋಧದಿಂದ ಸ್ಥಳದಲ್ಲಿ ವಾಗ್ವಾದವಾಗಿದೆ. ಆದರೆ ಪೊಲೀಸರು ದುರುದ್ದೇಶ ಪೂರಕವಾಗಿ ಶಾಸಕಿ ಪುತ್ರ, ತಮ್ಮ ಸೇರಿ ಏಳು ಜನ ಸಂಬAಽಗಳ ವಿರುದ್ದ ಕೇಸ್ ದಾಖಲಿಸಿ ತೇಜೋವಧೆ ಮಾಡುವ ಹುನ್ನಾರ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶರಣಗೌಡ ಸುಂಕೇಶ್ವರಹಾಳ, ಎನ್.ಶಿವಶಂಕರ,ಬಿ.ತಿಮ್ಮಾರೆಡ್ಡಿ, ರಾಮಕೃಷ್ಣ, ನರಸಪ್ಪ ಆಶಾಪುರು, ಮರೆಣ್ಣ, ಗುರುನಾಥರೆಡ್ಡಿ, ಚನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net