ಧರ್ಮದ ತಿರುಳು ತಿಳಿದರೆ ಭಾರತ ಸುಂದರ :ಸಯ್ಯಿದ್ ಕಾಜೂರು ತಂಙಳ್ ಹೇಳಿಕೆ

New Project (21)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಧರ್ಮ ಮತ್ತು ಆಧ್ಯಾತ್ಮಿಕತೆ ಒಳಗೊಂಡಿರುವ ಬದುಕು ಸೌಹಾರ್ದತೆಯ ನಾಡಿಗೆ ಪ್ರೇರಣೆ. ಧರ್ಮದ ಆಚಾರ್ಯರು, ಮುನಿಗಳು ಮತ ಪಂಡಿತರು ಕಲಿಸಿಕೊಡುವ ಮೂಲತತ್ವ ಕಲಿಯದೆ ಸ್ವತಂತ್ರವಾಗಿ ಬದುಕಲು ಆರಂಭಿಸಿರುವುದು ಸಂಘರ್ಷಗಳಿಗೆ ಕಾರಣವಾಗುತ್ತಿದೆ. ಧರ್ಮದ ತಿರುಳನ್ನು, ಧರ್ಮ ವಿಜ್ಞಾನವನ್ನು ಅನುಯಾಯಿಗಳಿಗೆ ಕಲಿಸಿಕೊಡಬೇಕಾದುದು ಧರ್ಮಶ್ರೇಷ್ಠರ ಜವಾಬ್ದಾರಿಯಾಗಿದೆ. ಇದರಿಂದ ಸುಂದರ ಭಾರತ ನೋಡಲು ಸಾಧ್ಯ ಎಂದು ಸಯ್ಯಿದ್ ಕಾಜೂರು ತಂಙಳ್ ಹೇಳಿದರು.

ಕಾಜೂರು ಮಖಾಂ ಶರೀಫ್‌ನಲ್ಲಿ ಆರಂಭಗೊಂಡ 2025ನೇ ಉರುಸ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ತಾಜುಲ್ ಉಲಮಾ ಅವರ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು.

ಸಯ್ಯಿದ್ ಸಾದಾತ್ ತಂಙಳ್ ಮಾತನಾಡಿ, ಸಯ್ಯಿದ್ ಕಾಜೂರು ತಂಙಳ್ ವಕ್ಫ್‌ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಪಿಡಿಒ ಮೋಹನ ಬಂಗೇರ, ಅನಿವಾಸಿ ಭಾರತೀಯರ ಅಂತಾರಾಷ್ಟ್ರೀಯ ಸಂಘಟನೆ ಕೆಸಿಎಫ್ ಇದರ ಇಹ್ಸಾನ್ ವಿಭಾಗದ ಚೇರ್ಮೆನ್ ಕೆ.ಎಂ.ಇಕ್ಬಾಲ್ ಕಾಜೂರು, ವಕೀಲ ನೂರುದ್ದೀನ್ ಸಾಲ್ಮರ ಮಾತನಾಡಿದರು.

ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಕೋಶಾಧಿಕಾರಿ ಕೆ.ಎಂ.ಕಮಾಲ್ ಕಾಜೂರು, ಜತೆಕಾರ್ಯದರ್ಶಿ ಶಾಹುಲ್ ಹಮೀದ್, ಕಾಜೂರು ಉಪಾಧ್ಯಕ್ಷ ಬದ್ರುದ್ದೀನ್, ಕಿಲ್ಲೂರು ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ, ರಾಜ್ಯ ಉಲಮಾ ಒಕ್ಕೂಟದ ಸದಸ್ಯ ಕೆ.ಯು.ಉಮರ್ ಸಖಾಫಿ, ಕಾಜೂರು ಮಾಜಿ ಅಧ್ಯಕ್ಷರಾದ ಕೆ ಶೇಖಬ್ಬ ಕುಕ್ಕಾವು, ಬಿ.ಎ.ಯೂಸುಫ್ ಶರೀಫ್, ಹಾಜಿ ಇಬ್ರಾಹಿಂ ಮದನಿ, ಮಿತ್ತಬಾಗಿಲು ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ, ಅಹ್ಮದ್ ಕಬೀರ್ ಕಾಜೂರು ಮತ್ತು ಶಾಹುಲ್ ಹಮೀದ್, ಮಲವಂತಿಗೆ ಗ್ರಾ.ಪಂ. ಸದಸ್ಯ ಕೆ.ಯು.ಮುಹಮ್ಮದ್, ಪ್ರಮುಖರಾದ ಶಶಿಧರ ಗೌಡ ಬೆಡಿಗುತ್ತು, ಕಿಲ್ಲೂರು ಮಾಜಿ ಅಧ್ಯಕ್ಷ ಎಂ.ಎ.ಕಾಸಿಂ ಮಲ್ಲಿಗೆಮನೆ, ಪ್ರಮುಖರಾದ ಅಬ್ದುಲ್ ಬಶೀರ್ ನೆಕ್ಕರೆ ಮುಂಡಾಜೆ, ಬಶೀರ್ ಮಾಹಿನ್, ಸಿರಾಜುದ್ದೀನ್ ಸಖಾಫಿ ಪಿಚಲಾರು, ಅಬ್ಬೋನು ಮದ್ದಡ್ಕ, ಅಶ್ರಫ್ ಬಿ.ನೆರಿಯ, ಸುಲೈಮಾನ್ ಚಾರ್ಮಾಡಿ, ಕರೀಂ ಹಾಜಿ ಲಾಯಿಲ, ಡಿ.ಡಿ.ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಮುಹಮ್ಮದ್ ರಫಿ ಬೆಳ್ತಂಗಡಿ ಉಪಸ್ಥಿತರಿದ್ದರು.

ಉರೂಸ್ ಸಮಿತಿ ಹಾಗೂ ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಙ ಮುಂಡಾಜೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.

ಉರುಸ್ ಸಂಪ್ರದಾಯದಂತೆ ಕಿಲ್ಲೂರಿನಿಂದ ಬೃಹತ್‌ಸಂದಲ್ ಮೆರವಣಿಗೆ, ವಾಹನ ಜಾಥಾ ಆಗಮಿಸಿ ಕಾಜೂರಲ್ಲಿ ಸ್ವಾಗತಿಸಲಾಯಿತು. ಉರುಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.

ಸಾಧಕರಿಗೆ ಸನ್ಮಾನ

ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಾದಾತ್ ತಂಙಳ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ, ಪಿಡಿಒ ಮೋಹನ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಯ ಮೂಲಕ ಪರಿವರ್ತನೆಗೊಳ್ಳುತ್ತಿರುವ ಕಾಜೂರನ್ನು ನೋಡಲು ಹೆಮ್ಮೆಯಾಗುತ್ತಿದೆ. ಪೂರ್ವ ವಿದ್ವಾಂಸರು ತೋರಿದ ಆದರ್ಶವನ್ನು ಪಾಲಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಸಯ್ಯಿದ್ ಸಾದಾತ್ ತಂಙಳ್ https://www.vijayavani.net/kuppettu-devasthanam-pratishapana-mahotsava https://www.vijayavani.net/s-d-m-multispeciality-hospital

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net