

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಾಜೂರು ಇಂದು ಪಾವಿತ್ರ್ಯದ ಜತೆಗೆ ಸೌಹಾರ್ದತೆ ಮತ್ತು ಮಾಹಿತಿಯ ಕ್ಷೇತ್ರವಾಗಿದೆ. ಚುನಾವಣೆಗೆ ಸ್ಪರ್ಧಿಸುವ ಮುನ್ನ ಇಲ್ಲಿಗೆ ಬಂದು ಪ್ರಾರ್ಥಿಸಿ ತೆರಳುವ ಪರಂಪರೆಯನ್ನು ಅನುಸರಿಸಿಕೊಂಡು ಬರುತ್ತಿದ್ದೇನೆ. ಇಂತಹ ಕ್ಷೇತ್ರಕ್ಕೆ ಮುಂದಿನ 30 ವರ್ಷಕ್ಕೆ ಬೇಕಾದಂತೆ ಮೂಲಸೌಕರ್ಯ ನಿರ್ಮಿಸಲು ಮಾಸ್ಟರ್ ಪ್ಲಾನ್ ರಚಿಸುವ ಮೂಲಕ ಅನುದಾನ ಒದಗಿಸಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಇತಿಹಾಸ ಪ್ರಸಿದ್ಧ ಕಾಜೂರಿನಲ್ಲಿ ಫೆ.2ರಂದು ನಡೆದ ಮಖಾಂ ಶರೀಫ್ ಉರುಸ್ನ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, 15 ಎಕರೆ ಪ್ರದೇಶದಲ್ಲಿರುವ ಕಾಜೂರು ಗಡಿನಾಡು, ಹೊರ ಜಿಲ್ಲೆಗಳಿಂದ ಲಕ್ಷೋಪಲಕ್ಷ ಭಕ್ತರು ಬರುವ ಪವಿತ್ರ ಕ್ಷೇತ್ರ. ಭಕ್ತರ ಅನುಕೂಲಕ್ಕಾಗಿ 15 ಕೋಟಿ ರೂ.ಮಾಸ್ಟರ್ ಪ್ಲಾನ್ ನೀಡಬೇಕು ಎಂದರು.
ಕಾಜೂರು ಉರುಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ, ಎಸ್ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಮತ್ತು ವಿದ್ವಾಂಸ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಧಾರ್ಮಿಕ ಸಂದೇಶ ನೀಡಿದರು.
ಕೇಂದ್ರ ಮುಶಾವರ ಸದಸ್ಯ ಕೆ.ಯು ಉಮರ್ ಸಖಾಫಿ ಕಾಜೂರು, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಯುವ ಉದ್ಯಮಿ ಲೆತೀಫ್ ಗುರುಪುರ, ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ಗುಪ್ತಚರ ಇಲಾಖೆಯ ಹೆಡ್ಕಾನ್ಸ್ಟೆಬಲ್ ಪಿ.ಎಂ.ಅಶ್ರಫ್ ಸರಳಿಕಟ್ಟೆ, ಹೆಡ್ಕಾನ್ಸ್ಟೆಬಲ್ ಸಲೀಂ, ಮಾಜಿ ಶಾಸಕ ಮೊಯಿದ್ದಿನ್ ಬಾವಾ, ಮುಹಮ್ಮದ್ ತೌಸೀಫ್ ಸಅದಿ ಹರೇಕಳ, ಶಂಶೀರ್ ಸಖಾಫಿ ಪರಪ್ಪು, ಯು.ಕೆ.ಮುಹಮ್ಮದ್ ಹನೀಫ್ ಉಜಿರೆ, ಡಾ.ಝುಲ್ಫಿಕರ್ ಅಹಮದ್ ಮಂಗಳೂರು, ಆರ್ಆರ್ಆರ್ ಅಬ್ದುಲ್ ರಹಿಮಾನ್ ಹಾಜಿ, ಮುಸ್ತಫಾ ರೂಬಿ, ಅಬ್ದುಲ್ ಕರೀಂ ಗೇರುಕಟ್ಟೆ, ಆನಂದ ಮೈರ್ನೋಡಿ, ತುಂಗಪ್ಪ ಪೂಜಾರಿ, ನಾಗೇಶ್ ಕುಮಾರ್, ಉದಯ ಸುವರ್ಣ, ವಝೀರ್ ಬಂಗಾಡಿ, ಸಾದಿಕ್ ಮಲೆಬೆಟ್ಟು, ಗುಲಾಮ್ ಮುಹಮ್ಮದ್ ಕನ್ನಂಗಾರ್, ಅಝೀಝ್ ಬೈಕಂಪಾಡಿ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ, ಶಾಫಿ ಮೂಳರಪಟ್ಣ, ಅಬೂಬಕ್ಕರ್ ಸಿದ್ದೀಕ್ ಮೊಂಟುಗೊಳಿ, ಶುಕೂರ್ ಉಜಿರೆ, ಕಬೀರ್ ಕಾಜೂರು, ಕೆ.ಯು.ಮುಹಮ್ಮದ್, ಝುಬೈರ್ ಸುಪ್ರಿಂ ಗುರುವಾಯನಕೆರೆ, ಅಲಿ ತುರ್ಕಳಿಕೆ, ಎಂ.ಎ.ಕಾಸಿಂ ಮಲ್ಲಿಗೆಮನೆ, ಎಚ್.ಮುಹಮ್ಮದ್ ವೇಣೂರು, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ.ಕಮಾಲ್ ಕಾಜೂರು, ಜತೆಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕಿಲ್ಲೂರು ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಸಹಿತ ಕಾಜೂರಿನ ಎಲ್ಲ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.
ಅಶ್ರಫ್ ಆಲಿಕುಞಿ ಮುಂಡಾಜೆ ನಿರೂಪಿಸಿದರು. ಕಾರ್ಯದರ್ಶಿ ಜೆ.ಎಚ್.ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.
ಅಭಿನಂದನೆ, ಪುರಸ್ಕಾರ
ಸಭಾಪತಿ ಯು.ಟಿ ಖಾದರ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ಶಿವರಾಂ, ಮಾಜಿ ಸಚಿವ ರಮಾನಾಥ ರೈ, ವಕ್ಫ್ ಜಿಲ್ಲಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಸ್ಪರ್ಧೆಗಳಲ್ಲಿ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಫ್ ಕಾಜೂರು ಸೆಕ್ಟರ್ ವತಿಯಿಂದ ಪುರಸ್ಕರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು.