ಕೈವಾರ ತಾತಯ್ಯ ಜಯಂತಿ ಆಚರಣೆ

26 gkp 02
ಪಾಲೆಬೆಟ್ಟದಲ್ಲಿ ಸೋಮವಾರ ಆಯೋಜಿಸಿದ್ದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್ ಶ್ರೀನಿವಾಸ್, ಗೀತಾ ನಾಯ್ಡು ಮತ್ತಿತರರು ಭಾಗವಹಿಸಿದ್ದರು.
Published on

ಗೋಣಿಕೊಪ್ಪ: ಕಾಲಜ್ಞಾನಿ ಕೈವಾರ ಶ್ರೀ ಯೋಗಿನಾರೇಯಣ ಯತೀಂದ್ರರ 298ನೇ ಜಯಂತ್ಯುತ್ಸವವನ್ನು ಸೋಮವಾರ ದಕ್ಷಿಣ ಕೊಡಗಿನ ಪಾಲಿಬೆಟ್ಟದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಕೈವಾರ ತಾತಯ್ಯ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿದ ನಂತರ ಕೊಡಗು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಜಯಂತಿಯನ್ನು ಆಚರಿಸುತ್ತಾ ಬರಲಾಗಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೊಡಗು ಬಲಿಜ ಸಮಾಜ ವತಿಯಿಂದ ಜಯಂತಿಯನ್ನು ವಿವಿಧೆಡೆ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಕೈವಾರ ತಾತಯ್ಯ ಜಯಂತಿ ಆಚರಣೆ ಮೂಲಕ ಜನಸಾಮಾನ್ಯರಲ್ಲಿ ಸಾತ್ವಿಕತೆ ಬೆಳೆಸಲು, ಆಧ್ಯಾತ್ಮ ಚಿಂತನೆಯತ್ತ ಒಲವು ಬೆಳೆಸಲು ಕಳೆದ 5 ವರ್ಷಗಳಿಂದ ಕೊಡಗಿನಲ್ಲಿ ಕೈವಾರ ತಾತಯ್ಯ ಜಯಂತಿಯನ್ನು ಆಚರಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಪಾಲಿಬೆಟ್ಟದ ಕೊಡಗು ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net