ನಿಜವಾಗುತ್ತಿದೆ ಕೈವಾರ ತಾತಯ್ಯ ಕಾಲಜ್ಞಾನ

KDR tatayya
ಕಡೂರು ತಾಲೂಕು ಕಚೇರಿಯಲ್ಲಿ ಕೈವಾರ ತಾತಯ್ಯ ಅವರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಎಂ.ಪಿ.ಕವಿರಾಜ್, ಸೂರಿ ಶ್ರೀನಿವಾಸ್, ನರೇಂದ್ರನಾಥ್, ಮಂಗಳಾ, ವಿಜಯ್ ಇತರರಿದ್ದರು.
Published on

ಕಡೂರು: ನಾಡಿಗೆ ಕಾಲಜ್ಞಾನಿ, ಪವಾಡಪುರುಷ ಕೈವಾರ ತಾತಯ್ಯ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಸೋಮವಾರ ಕಾಲಜ್ಞಾನಿ ಕೈವಾರ ತಾತಯ್ಯ ಜಯಂತಿ ಆಚರಣೆಯಲ್ಲಿ ಮಾತನಾಡಿ, ನಾಡಿನಾದ್ಯಂತ ಸಂಚಾರ ಮಾಡಿ ತಮ್ಮದೇ ಆದ ಶಕ್ತಿ ವೃದ್ಧಿಸಿಕೊಂಡು ಪವಾಡಗಳ ಮೂಲಕ ಬಡವರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ ಕೈವಾರ ತಾತಯ್ಯ ಹೇಳಿರುವ ಕಾಲಜ್ಞಾನ ನಿಜವಾಗಿವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾತಯ್ಯ ಅವರ ಕಾಲಜ್ಞಾನ ನುಡಿಗಳು ಸಾಬೀತಾಗಿವೆ. ಪ್ರಪಂಚದಲ್ಲಿ ವಿಷಜಂತುಗಳು ಹೆಚ್ಚಾಗಲಿವೆ ಎಂದು ಹೇಳಿದಂತೆ ಪ್ಲೇಗ್, ಕರೊನಾದಂತಹ ಕಾಯಿಲೆಗಳು ಬಂದುಹೋಗಿವೆ. ಬಳೆ ವ್ಯಾಪಾರ ಕಾಯಕದಲ್ಲಿ ಹಳ್ಳಿಗಳಿಗೆ ತೆರಳಿ ವೃತ್ತಿ ಜತೆಗೆ ಆಧ್ಯಾತ್ಮಿಕ ಚಿಂತನೆ ಮೂಲಕ ಜನರನ್ನು ಒಳ್ಳೆಯ ಮಾರ್ಗಕ್ಕೆ ಕೊಂಡೊಯ್ದರು ಎಂದು ತಿಳಿಸಿದರು.
ಬಲಿಜ ಸಮಾಜದ ಜಿಲ್ಲಾಧ್ಯಕ್ಷ ನರೇಂದ್ರನಾಥ್ ಮಾತನಾಡಿ, ಬಜಿಜ ಸಮಾಜ ಹಿಂದುಳಿದಿದೆ. ಕೈವಾರ ತಾತಯ್ಯ ನಮ್ಮ ಸಮಾಜಕ್ಕೆ ಆಶಾಕಿರಣ. ಅವರ ತತ್ವಪದಗಳು ಇಂದಿಗೂ ಪ್ರಸ್ತುತ ಎಂದರು.
ಕೈವಾರ ತಾತಯ್ಯ ಅವರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಗ್ರೇಡ್ 2 ತಹಸೀಲ್ದಾರ್ ಕಲ್ಮರುಡಪ್ಪ, ವಕೀಲೆ ಮಂಗಳಾ, ಮುಖಂಡರಾದ ಅಶೋಕ್, ವಿಜಯ್, ಗೋವಿಂದರಾಜು, ವೈ.ಎಸ್.ಹನುಮಂತಪ್ಪ, ಸುಬ್ರಹ್ಮಣ್ಯ, ಶಶಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net