ಮಾತಾಡಿದ್ದನ್ನು ಜಾರಿಗೊಳಿಸುವುದೇ ಕೈ ವೈಶಿಷ್ಟೃ

prmanpatra vitarane
pardಇಳಕಲ್ಲದಲ್ಲಿ ನಡೆದ ಗೃಹಲಕ್ಷ್ಮಿಯೋಜನೆಯ ಲಾನುಭವಿಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಮಾಣಪತ್ರ ವಿತರಿಸಿದರು. ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಜಿಲ್ಲಾ ಹಿರಿಯರ ಮತ್ತು ಅಂಗವಿಕಲರ ಇಲಾಖೆ ಉಪ ನಿರ್ದೇಶಕಿ ಸವಿತಾ ಕಾಳೆ, ತಾಲೂಕು ಶಿಶು ಮತ್ತು ಮಹಿಳಾ ಇಲಾಖೆ ಅಧಿಕಾರಿ ಅನ್ನಪೂರ್ಣ ಹುರಕಡ್ಲಿ, ತಾಪಂ ಇಒ ಮುರಳಿ ದೇಶಪಾಂಡೆ, ಪೌರಾಯುಕ್ತ ಶ್ರೀನಿವಾಸ ಜಾಧವ ಇದ್ದರು.
Published on

ಇಳಕಲ್ಲ(ಗ್ರಾ): ಚುನಾವಣೆ ಸಂದರ್ಭ ಕೊಟ್ಟ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದ್ದು, ಅದರಲ್ಲಿ ಗೃಹಲಕ್ಷ್ಮಿಯೋಜನೆಯಡಿ ಸಲ್ಲಿಸಿದ 37,712 ಅರ್ಜಿಗಳ ಪೈಕಿ 32,264 ಅರ್ಜಿಗಳ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗೃಹಲಕ್ಷ್ಮಿಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕೇವಲ ಮಾತನಾಡುವುದು ಕಾಂಗ್ರೆಸ್‌ನಲ್ಲಿ ಇಲ್ಲ. ಮಾತಾಡಿದ್ದನ್ನು ಜಾರಿಗೊಳಿಸುವಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಅದನ್ನೆಲ್ಲ ಎದುರಿಸಿ ನಿಲ್ಲುವುದೇ ಸರ್ಕಾರದ ವೈಶಿಷ್ಟೃ ಎಂದರು.

ತಾಪಂ ಇಒ ಮುರಳಿ ದೇಶಪಾಂಡೆ, ಜಿಲ್ಲಾ ಹಿರಿಯರ ಮತ್ತು ಅಂಗವಿಕಲ ಇಲಾಖೆ ಉಪನಿರ್ದೇಶಕಿ ಸವಿತಾ ಕಾಳೆ, ತಾಲೂಕು ಶಿಶು ಮತ್ತು ಮಹಿಳಾ ಇಲಾಖೆ ಅಧಿಕಾರಿ ಅನ್ನಪೂರ್ಣ ಹುರಕಡ್ಲಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪೌರಾಯುಕ್ತ ಶ್ರೀನಿವಾಸ ಜಾಧವ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಮೌಲಪ್ಪ ಬಂಡಿವಡ್ಡರ, ಅಮೃತ ಬಿಜ್ಜಳ, ರೇಷ್ಮಾ ಮಾರನಬಸರಿ, ಸುಧಾರಾಣಿ ಸಂಗಮ, ಆಫ್ರೀನ್ ಸೋನಾರ, ನಜ್ಮಾ ಬನ್ನಿಗೋಳ, ಶರಣಮ್ಮ ತಿಮ್ಮಾಪೂರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ ಸಾಕಾ, ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಬ್ದುಲರಜಾಕ್ ತಟಗಾರ, ಶಬ್ಬೀರ್ ಬಾಗವಾನ, ಅಹಮದಸಾಬ್ ಬಾಗವಾನ ಮತ್ತಿತರರಿದ್ದರು.

ಮಹಿಳೆಯರು ಸ್ವಾವಲಂಬಿಗಳಾಗಲು ಗೃಹಲಕ್ಷ್ಮಿ ಯೋಜನೆ ಕಲ್ಪವೃಕ್ಷದಂತೆ ಸಿಕ್ಕಿದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತೇವೆ.ಮಂಜುಳಾ, ಗೃಹಲಕ್ಷ್ಮಿ ಫಲಾನುಭವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net