ಕೈರಂಪಣಿ ಮೀನುಗಾರರಿಗೆ ಭರ್ಜರಿ ಮೀನು

maanji
Published on

ಪಡುಬಿದ್ರಿ: ಇಲ್ಲಿನ ನಡಿಪಟ್ಣ ಬಳಿ ಸೋಮವಾರ ಸಮುದ್ರ ಮೀನುಗಾರಿಕೆ ನಿರತ ಕಾಡಿಪಟ್ಣ ಮತ್ತು ನಡಿಪಟ್ಣ ಕೈರಂಪಣಿ ಫಂಡ್ ಬಲೆಗೆ ಭಾರಿ ಪ್ರಮಾಣದ ತರಹೇವಾರಿ ಮೀನು ಲಭಿಸಿದೆ.

ಬೆಳಗ್ಗೆ ಸಮುದ್ರಕ್ಕಿಳಿದ ಎರಡೂ ಕೈರಂಪಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣಂಗು ಸಹಿತ ಮಾಂಜಿ, ಕೊಡ್ಡಾಯಿ ಹಾಗೂ ಇತರ ಹಲವು ಬಗೆಯ ಮೀನುಗಳು ಸೇರಿ ಸುಮಾರು 5 ಟನ್‌ಗಳಷ್ಟು ಮೀನು ಸಿಕ್ಕಿದೆ.

ಎರಡು ದಿನಗಳಿಂದ ಕೈರಂಪಣಿ ನಡೆಯುತ್ತಿದ್ದು, ಭಾನುವಾರ ಕಾಡಿಪಟ್ಣ ಕೈರಂಪಣಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಮಾಂಜಿ ಮೀನು ಲಭಿಸಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ನಡಿಪಟ್ಣದಲ್ಲಿ ಮೀನು ಲಭಿಸಿರುವ ಮಾಹಿತಿ ಪಡೆದ ಜನ ಪ್ಲಾಸ್ಟಿಕ್ ಚೀಲ ಹಿಡಿದು ಕಡಲ ಕಿನಾರೆಗೆ ದೌಡಾಯಿಸಿ ಬಲೆಯಿಂದ ಹೊರಬಿದ್ದ ಮೀನು ಹೆಕ್ಕಲು ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net