

ಮಡಿಕೇರಿ: ಕೊಡವ ಜನಾಂಗದ ಆಚಾರವಿಚಾರ ಒಗ್ಗಟು ಒರ್ತ್ತೊಮೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ ಶ್ರಮಿಸಲಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಹೇಳಿದರು.
ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೈಲ್‌ಪೊಳ್ದ್ ಸಂತೋಷಕೂಟ ಹಾಗೂ ಕೊಡವ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಮುತುವರ್ಜಿಯ ಫಲವಾಗಿ ಚೆಟ್ಟಳ್ಳಿ ಕೊಡವಸಮಾಜದ ಸ್ಥಾಪನೆಯಾಯಿತು. ಕೊಡವ ಜನಾಂಗದ ಆಚಾರವಿಚಾರ ಒಗ್ಗಟು ಒರ್ತ್ತೊಮೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ ಶ್ರಮಿಸಲಿದೆ. ಎಲ್ಲರು ಸಹಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಸಂಘದ ಸದಸ್ಯರಾಗಿ ಮೃತಪಟ್ಟ ಬಲ್ಲಾರಂಡ ಕಾಳಪ್ಪರವಿಗೆ ಸಂತಾಪ ಸೂಚಿಸಲಾಯಿತು. ಕಳೆದ ವರ್ಷದ ಮಹಾಸಭೆಯವರದಿ ಹಾಗೂ ಆಡಳಿತಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್‌ಕಾಳಯ್ಯ, ಲೆಕ್ಕಪತ್ರವನ್ನು ಖಜಾಂಜಿ ಪುತ್ತರಿರ ಗಂಗುಅಚ್ಚಯ್ಯ ಮಂಡಿಸಿದರು. ಸಮಾಜದಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಪಳಗಂಡ ಗೀತಾಸುಬ್ಬಯ್ಯ ಪ್ರಾರ್ಥಿಸಿ ಜಂಟಿಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ ಸ್ವಾಗತಿಸಿ ಉಪಾಧ್ಯಕ್ಷೆ ಐಚೆಟ್ಟೀರ ಸುನಿತಾಮಾಚಯ್ಯ ವಂದಿಸಿದರು.
ನಂತರದಲ್ಲಿ ಕೈಲ್‌ಪೊಳ್ದ್ ಸಂತೋಷಕೂಟದ ಅಂಗವಾಗಿ ಹಿರಿಯ ಸದಸ್ಯ ವಾಯುಪಡೆಯ ನಿವೃತ್ತಅಧಿಕಾರಿ ಪುತ್ತರಿರ ಗಣೇಶ್‌ಭೀಮಯ್ಯ ಕೋವಿಕತ್ತಿಗೆ ಪೂಜೆಸಲ್ಲಿಸಿ, ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ಸಾಂಪ್ರದಾಯಿಕ ಆಚರಣೆ ಯನ್ನು ಮಾಡಲಾಯಿತು. ನಂತರದಲ್ಲಿ ವಿವಿಧ ಮನೋರಂಜನಾ ಸ್ಪರ್ಧೆ ಏರ್ಪಡಿಸಲಾಯಿತು.
ಸಮಾರೋಪ: ಮದ್ಯಾಹ್ನದನಂತರ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪನವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕೊಂಗೇಟಿರ.ಡ್ಲ್ಯೂ ಚಂಗಪ್ಪ, ಬಲ್ಲಾರಂಡ ಗೌತಮಿ, ಬಿದ್ದಂಡಮಾದಯ್ಯ, ಕೊಂಗೇಟಿರ ರಾಣಾಪೂವಯ್ಯ ವೇದಿಕೆಯಲ್ಲಿದ್ದರು. ಪತ್ರಿಕಾಕ್ಷೇತ್ರದಲ್ಲಿ ಸಾಧನೆ ಹಾಗೂ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆಸಲ್ಲಿಸುತಿರುವ ಕಾರ್ಯದರ್ಶಿ ಪುತ್ತರಿರ ಕರುಣ್‌ಕಾಳಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಮನೋರಂಜನಾ ಕ್ರೀಡೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ಜಂಟಿ ಖಜಾಂಜಿ ಐಚೆಟ್ಟೀರ ಮಾಚಯ್ಯ, ನಿರ್ದೆಶಕರುಗಳಾದ ಬಟೀರಕಾಳಪ್ಪ, ಬಿದ್ದಂಡ ಮಾದಯ್ಯ, ಪುತ್ತರಿರ ಕಾಶಿ ಸುಬ್ಬಯ್ಯ, ಕೆಚೆಟ್ಟೀರ ರತಿ ಕಾರ್ಯಪ್ಪ, ಕಾನೂನು ಸಲಹೆಗಾರ ವಕೀಲ ಕಡೇಮಡ ವಿನ್ಸಿ ಅಪ್ಪಯ್ಯ, ಅಡಿಕೇರ ಶಾಂತಿಜಯ, ಪಳಂಗಂಡ ಶ್ಯಾಂಕಾಳಪ್ಪ ಹಾಗೂ ಸಮಾಜದ ಸದಸ್ಯರುಗಳು ಭಾಗವಹಿಸಿದ್ದರು.