ಚೆಟ್ಟಳ್ಳಿಯಲ್ಲಿ ಕೈಲ್‌ಪೊಳ್ದ್ ಒತ್ತೊರ್ಮೆ ಕೂಟ

Kailpold rally at Chettalli
Published on

ಮಡಿಕೇರಿ:

ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ 2023-24ನೇ ಸಾಲಿನ ಮಹಾಸಭೆ ಮತ್ತು ಕೈಲ್‌ಪೊಳ್ದ್ ಒತ್ತೊರ್ಮೆ ಕೂಟ ಭಾನುವಾರ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಕೊಡವರು ಮುಂದೆ ಬಂದರೆ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಕೊಡಗಿನ ಹಬ್ಬ ಹರಿದಿನಗಳನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಕೊಡಗಿನ ಜಾಗವನ್ನು ಮಾರಾಟ ಮಾಡುವುದು ನಿಂತರೆ ಮಾತ್ರ ಕೊಡಗು ಉಳಿಯಲು ಸಾಧ್ಯ ಎಂದರು.

ಕಳೆದ ಮಹಾಸಭೆಯ ವರದಿ ಮತ್ತು ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಲೆಕ್ಕಪತ್ರ ವರದಿಯನ್ನು ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ ಓದಿ ಅಂಗಿಕರಿಸಲಾಯಿತು. ಬಲ್ಲಾರಂಡ ರಾಜಪ್ಪ ಮೋಟಯ್ಯ, ಮುಳ್ಳಂಡ ಮಾಯಮ್ಮ ತಮ್ಮಯ್ಯ, ಪುತ್ತರಿರ ರಾಬಿನ್ ಚಂಗಪ್ಪ ಅÀವರನ್ನು ಸಮಾಜದ ನಿರ್ದೇಶಕರಾಗಿ ಈ ಸಂದರ್ಭ ಆಯ್ಕೆ ಮಾಡಲಾಯಿತು.

ಸಮಾಜದ ಮುಂದಿನ ಅಭಿವೃದ್ಧಿ ಕಾರ್ಯದ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. ಸಮಾಜದ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಂದಿದ್ದು ಸೂಕ್ತ ಜಾಗದ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿ ಹಲವು ಕಾರ್ಯಕ್ರಮವನ್ನು ಮಾಡುತಿದ್ದ ಬಗ್ಗೆ ಸಭೆಯಲ್ಲಿ ಪ್ರಶಂಸಿಸಲಾಯಿತು
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾದ ಚೆಟ್ಟಳ್ಳಿ ಕೊಡವ ಸಮಾಜದ ಸದಸ್ಯ ಪುತ್ತರಿರ ಪಪ್ಪುತಿಮಯ್ಯನವರಿಗೆ ಸಮಾಜವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸದಸ್ಯ ಹಾಗು ವಾಯುಪಡೆಯ ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಸಾಂಪ್ರದಾಯಿಕ ಆಯುದ್ದ ಪೂಜೆ ಮತ್ತು ಗುರು ಕಾರೋಣನಿಗೆ ಮೀದಿ ನೀರಿಟ್ಟು ಎಲ್ಲರಿಗೂ ಒಳಿತನ್ನು ಮಾಡಲೆಂದು ಆಶಿಸಿದರು.

ಬಿದ್ದಂಡ ಮಾದಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೈಲ್ ಪೊಳ್ದ್ ಒತ್ತೊರ್ಮೆ ಕೂಟಕ್ಕೆ ಚಾಲನೆ ನೀಡಿದರು. ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ನಂತರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ನಿರ್ದೇಶಕ ಬಿದ್ದಂಡ ಮಾದಯ್ಯ, ಬಟ್ಡೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ ,ಕಡೇಮಡ ವಿನ್ಸಿ ಅಪ್ಪಯ್ಯ ,ಅಡಿಕೇರ ಶಾಂತಿ ಜಯ, ಕೆಚ್ಚಟ್ಟೀರ ರತಿ ಕಾರ್ಯಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net