ಸೆ.೩ ರಂದು ಕೈಲ್‌ಪೊಳ್ದ್ ಕಳಿಕೂಟ

Z SPORTS 1
Published on

ಮಡಿಕೇರಿ: ಮರ್ಕರ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸೆ.೩ ರಂದು ಕೈಲ್‌ಪೊಳ್ದ್ ಕಳಿಕೂಟ ನಡೆಯಲಿದೆ ಅಸೋಸಿಯೇಷನ್‌ನ ಮುಖ್ಯಸ್ಥ ಕುಕ್ಕೇರ ಜಯ ಚಿಣ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಂದು ಮಧ್ಯಾಹ್ನ ೨ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಸ್ಪರ್ಧೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ.


ಸಂಜೆ ೫ ಗಂಟೆಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಭಾಗವಹಿಸಲಿದ್ದಾರೆ. ಚೆಕ್ಕೇರ ಪಂಚಮ್ ಬೋಪಣ್ಣ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಸ್ಪರ್ಧೆಗಳು: ಮಹಿಳೆಯರು ಮತ್ತು ಪುರುಷರಿಗೆ ಕೇರ್ ಬಲಿ(ಹಗ್ಗ ಜಗ್ಗಾಟ) ಸ್ಪರ್ಧೆ, .೨೨ ಮತ್ತು ೧೨ ಬೋರ್ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ, ೬೦ ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರಿಗೆ ೧೦೦ ಮೀ. ಹಾಗೂ ೫೦ ಮೀ. ಓಟದ ಸ್ಪರ್ಧೆ, ೧೫ ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ೧೦೦ ಮೀ. ಓಟದ ಸ್ಪರ್ಧೆ, ೬ ವರ್ಷದೊಳಗಿನ ಮಕ್ಕಳಿಗೆ ಚುಪ್ಪಿಕ್ ಪೆಪ್ಪಿ ಸ್ಪರ್ಧೆ, ಎಲ್ಲಾ ವಯಸ್ಸಿನ ಪುರುಷ ಹಾಗೂ ಮಹಿಳೆಯರಿಗೆ ಬಾಂಬ್ ಇನ್ ದಿ ಸಿಟಿ ಸ್ಪರ್ಧೆ ನಡೆಯಲಿದೆ. ಮಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೊಡವ ಬಾಂಧವರು ಪಾಲ್ಗೊಳ್ಳುವಂತೆ ಜಯ ಚಿಣ್ಣಪ್ಪ ಮನವಿ ಮಾಡಿದ್ದಾರೆ.


ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಚೊಟ್ಟೆಯಂಡ ಸಂಜು-೯೦೧೯೮೮೯೬೩೩ ಹಾಗೂ ಅಜ್ಜಮಕ್ಕಡ ವಿನು ಕುಶಾಲಪ್ಪ-೯೪೪೮೯೮೨೩೦೮ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net