ಚೆಟ್ಟಳ್ಳಿಯಲ್ಲಿ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ

kailpodh
Published on

ಮಡಿಕೇರಿ: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಹಿರಿಯರಾದ ಕೊಂಗೇಟೀರ ಡ್ಲೂ.ಚಂಗಪ್ಪ ಸಾಂಪ್ರದಾಯಿಕವಾಗಿ ಕೋವಿ, ಕತ್ತಿ ಆಯುದ್ದ ಪೂಜೆ ಸಲ್ಲಿಸಿ ಗುರುಕಾರೋಣನಿಗೆ ಮೀದಿ ನೀರಿಟ್ಟು ಪ್ರಾರ್ಥಿಸಲಾಯಿತು. ವಾಯುಪಡೆಯ ನಿವೃತ್ತ ಸೇನಾನಿ ಪುತ್ತರೀರ ಗಣೇಶ್ ಭೀಮಯ್ಯ ಇದ್ದರು.

ಹಿರಿಯರಾದ ಪುತ್ತರೀರ ಗಣೇಶ್ ಭೀಮಯ್ಯನವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ವಿವಿಧ ಕ್ರೀಡೆ ನಡೆದವು. ಕಾರ್ಯಕ್ರಮದ ಅಂಗವಾಗಿ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಹಿರಿಯರಾದ ಕೊಂಗೇಟಿರ ಮೀರಾ ಚಂಗಪ್ಪ, ಬಿದ್ದಂಡ ರಾಧಾಮಾದಯ್ಯ, ಐಚೆಟ್ಟೀರ ಚೋಂದಮ್ಮ ಅಪ್ಪಯ್ಯ, ಬಲ್ಲಾರಂಡ ಗೌತಮಿ ಚಿಣ್ಣಪ್ಪ ರವರು ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜೇತರು: ತೆಂಗಿನಕಾಯಿಹೊಡೆಯುವ ಸ್ಪರ್ಧೆಯಲ್ಲಿ ಪುತ್ತರೀರ ಪಪ್ಪುತಿಮ್ಮಯ್ಯ(ಪ್ರ), ಪೊರಿಮಂಡ ದ್ಯಾನ್ ಪೊನ್ನಣ್ಣ(ದ್ವಿ), ಪುತ್ತರಿರ ರಾಜೇಶ್ ಮುತ್ತಪ್ಪ ತ್ರತೀಯ ಬಹುಮಾನ ಪಡೆದರು. ಪಾಸಿಂಗ್ ದ ಬೋಲ್‌ನಲ್ಲಿ ಬಲ್ಲಾರಂಡ ಸ್ವಾತಿ ನಾಣಯ್ಯ(ಪ್ರ), ಬಲ್ಲಾರಂಡ ಮುತ್ತಮ್ಮ ಉತ್ತಯ್ಯ(ದ್ವಿ), ಬಾಂಬ್ ಯಿಂದ ಸಿಟಿಯಲ್ಲಿ ಮತ್ರರಂಡ ಮೀರಾ ಬಿದ್ದಪ್ಪ(ಪ್ರ), ಪೊರಿಮಂಡ ತಂಗಮ್ಮ(ದ್ವಿ), ಕಲರ್ ರೆಕಗನೇಷನ್‌ನಲ್ಲಿ ಪಳಗಂಡ ಗೀತಾ ಸುಬ್ಬಯ್ಯ(ಪ್ರ), ಚೋಳಪಂಡ ಜ್ಯೋತಿ ನಾಣಯ್ಯ(ದ್ವಿ) ಬಹುಮಾನ ಪಡೆದರು.

ಸಮಾಜದ ಮಹಾಸಭೆ: ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಮುಳ್ಳಂಡ ರತ್ತುಚಂಗಪ್ಪರವರ ಅಧ್ಯಕ್ಷತೆಯಲ್ಲಿ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಸಮಾಜದ ೫ನೇ ವರ್ಷದ ಮಾಹಾಸಭೆ ನಡೆಯಿತು.

ಸಮಾಜದ ಅಧ್ಯಕ್ಷ ರತ್ತುಚಂಗಪ್ಪ್ ಮಾತನಾಡಿ, ಕೊಡವ ಜನಾಂಗದ ಅಚಾರವಿಚಾರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚೆಟ್ಟಳ್ಳಿ ಕೊಡವ ಸಮಾಜ ಪ್ರಾರಂಭ ಗೊಂಡಿದ್ದು ಎಲ್ಲರ ಸಹಕಾರ ದಿಂದ ಸಮಾಜದ ಅಭಿವೃದ್ಧಿ ಸಾಧ್ಯವೆಂದರು. ಸಮಾಜದ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಲೆಕ್ಕಪತ್ರವರದಿಯನ್ನು ಖಜಾಂಜಿ ಕೆಚ್ಚೆಟ್ಟೀರ ರತಿಕಾರ್ಯಪ್ಪ ಓದಿದರು. ಈಗಿನ ಆಡಳಿತ ಮಂಡಳಿಯೇ ಮುಂದುವರೆಸುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾಣವನ್ನು ಕೈಗೊಳ್ಳಲಾಯಿತು. ನಿರ್ದೇಶಕರಾದ ಬಟ್ಟೀರ ರಕ್ಷುಕಾಳಪ್ಪ ವಂದಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬಿದ್ದಂಡ ಮಾದಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ಖಜಾಂಜಿ ಕೆಚ್ಚೆಟ್ಟೀರ ರತಿಕಾರ್ಯಪ್ಪ, ನಿರ್ದೇಶಕರಾದ ಬಟ್ಟೀರ ರಕ್ಷು ಕಾಳಪ್ಪ, ಪುತ್ತರೀರ ಕಾಶಿಸುಬ್ಬಯ್ಯ, ಅಡಿಕೇರ ಶಾಂತಿ ಮುತ್ತಪ್ಪ, ಬಲ್ಲಾರಂಡ ರಾಜಪ್ಪ ಮೋಟಯ್ಯ, ಮುಳ್ಳಂಡ್ ಮಾಯಮ್ಮ ತಮ್ಮಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net