ಕೊಡವ ಸಮಾಜದಿಂದ ಕೈಲ್‌ಪೊಳ್ದ್ ಆಚರಣೆ

kaipodh
Published on

ಮಡಿಕೇರಿ: ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಕೈಲ್ ಪೊಳ್ದ್ ಅಚರಣೆಯನ್ನು ಮಾಡಲಾಯಿತು.

ಸಮಾಜದ ಅಧ್ಯಕ್ಷರಾದ ಮಂಡುವಂಡ.ಪಿ.ಮುತ್ತಪ್ಪ ಅವರು ಅಯುದಗಳಿಗೆ ಪೂಜೆಸಲ್ಲಿಸಿದರು. ವೀರ ಪರಂಪರೆಯ ನಾಡಿಯಲ್ಲಿ ಆಯುಧ ಪೂಜೆಯ ಸಂಪ್ರದಾಯಕ್ಕೆ ವಿಶೇಷ ಆದ್ಯತೆ ಇದ್ದು ಸೆಪ್ಟಂಬರ್ ಮೂರರಂದು ಹೆಚ್ಚಿನೆಡೆ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಲಾಗಿದೆ. ಸಮಾಜದ ವತಿಯಿಂದ ಪ್ರತಿವರ್ಷದಂತೆ ಈವರ್ಷವೂ ನಮ್ಮೆಯನ್ನು ಮಾಡಲಾಗುತ್ತಿದೆ ಎಂದರು.

ಸಮಾಜದ ನಿರ್ದೇಶಕರು ಹಾಗೂ ಸಿಬಂದಿ ವರ್ಗದ ಪುರುಷರು ಹಾಗೂ ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆದರು. ನಂತರ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಸಮಾಜದ ಉಪಾದ್ಯಕ್ಷರಾದ ಕೇಕಡ ವಿಜು ದೇವಯ್ಯ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್‌ಕುಮಾರ್, ಜಂಟಿಕಾರ್ಯದರ್ಶಿ ನಂದಿನೆರವಂಡ.ದಿನೇಶ್, ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮಂಡೀರ್ ಸದಾಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆವಂಡ ರವಿ ಬಸಪ್ಪ, ಕನ್ನಂಡ್ ಕವಿತ ಕಾವೇರಮ್ಮ, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೇರ್ ಲಲ್ಲು ಕುಟ್ಟಪ್ಪ ವ್ಯವಸ್ಥಾಪಕಿ ಮೈನಾ ಬೋಜಮ್ಮ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ಬೋಜನವನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net