ತಣ್ಣಿಮಾನಿಯಲ್ಲಿ ಕೈಲ್‌ಮುಹೂರ್ತ ಸಂಭ್ರಮ

Kail Muhurta celebration in Thannimani
Published on

ಮಡಿಕೇರಿ:

ಕೈಲ್‌ಮುಹೂರ್ತ ಹಬ್ಬದ ಪ್ರಯುಕ್ತ ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ಭಗವತಿ ಯುವ ಮಂಡಳಿ ವತಿಯಿಂದ ಗುರುವಾರ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರಿಗೆ 5 ಕಿಲೋಮೀಟರ್ ಮತ್ತು ಮಹಿಳೆಯರಿಗೆ 4 ಕಿಲೋ ಮೀಟರ್ ದೂರದ ಶ್ರೀ ಕಾವೇರಿ ಮಿನಿ ಮ್ಯಾರಾಥಾನ್ ಓಟವನ್ನೂ ಆಯೋಜಿಸಲಾಗಿತ್ತು. ಭಾಗಮಂಡಲ ಮಾರುಕಟ್ಟೆ ಬಳಿ ಪುರುಷರ ಮ್ಯಾರಾಥಾನ್ ಮತ್ತು ಪೊಲೀಸ್ ಠಾಣೆಯ ಹತ್ತಿರದಿಂದ ಮಹಿಳೆಯರ ಮ್ಯಾರಾಥಾನ್ ಆರಂಭವಾಗುವುರೊAದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಪುರುಷರ ಮೆರಥಾನ್ ಓಟದಲ್ಲಿ 75 ವರ್ಷದ ತಣ್ಣಿಮಾನಿ ನಿವಾಸಿ ಪಾಂಡಿ ಮನೆ ಎಂ ಪೂವಯ್ಯ ಭಾಗವಹಿಸಿ ಸಂಪೂರ್ಣ 5 ಕಿಲೋ ಮೀಟರ್ ಪೂರ್ಣಗೊಳಿಸಿ ಯುವಕರಲ್ಲಿ ಕ್ರೀಡಾ ಪ್ರೋತ್ಸಾಹ ನೀಡಿದರು.

ತಣ್ಣಿಮಾನಿ ಶ್ರೀ ಭಗವತಿ ದೇವಸ್ಥಾನ ಆವರಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಿಗೆ ಬಹುಮಾನವನ್ನು ಗ್ರಾಮಸ್ಥರೇ ಪ್ರಾಯೋಜಿಸಿದ್ದು ವಿಶೇಷವಾಗಿತ್ತು. ಸ್ಪರ್ಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಗಮನ ಸೆಳೆದರು. ಪಾಂಡಿ ಭಾನುಪ್ರಕಾಶ್, ಕುದುಪಜೆ ಗಗನ್, ಕುದುಕುಳಿ ಕಿಶೋರ್ ಮತ್ತಿತರರ ನೇತೃತ್ವದಲ್ಲಿ ಈ ಕ್ರೀಡಾಕೂಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net