ನವೆಂಬರ್‌ನಲ್ಲಿ ಕೈಗಾ 5 ಮತ್ತು 6 ನೇ ಘಟಕಕ್ಕೆ ತಳಪಾಯ

Kaiga and 6
Published on

ಕೈಗಾ ಅಣು ವಿದ್ಯುತ್ ಕೇಂದ್ರದ 28 ಕಿಮೀ ಸುತ್ತಳತೆಯ ಗ್ರಾಮಗಳಲ್ಲಿ, ಜಿಲ್ಲೆಯ ಹಿಂದುಳಿಯ ಜೊಯಿಡಾ,ಮುಂಡಗೋಡ ತಾಲೂಕುಗಳಲ್ಲಿ, ರಾಜ್ಯದಲ್ಲಿ ಹಿಂದುಳಿದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಮಾಜಿಕ ಜವಾನ್ದಾರಿ ನಿಽಯಲ್ಲಿ, ರಸ್ತೆ, ಸೇತುವೆ, ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಪ್ರತಿ ವರ್ಷ 9 ರಿಂದ 16 ಕೊಟಿಯವರೆಗೂ ಹಣವನ್ನು ಸಾರ್ವಜನಿಕರಿಗಾಗಿ ನೀಡಲಾಗುತ್ತಿದೆ. ಇದುವರೆಗೆ 110. ಕೋಟಿ ರೂ. ಖರ್ಚು ಮಾಡಲಾಗಿದೆ. ಅಲ್ಲದೇ ಪರಿಸರ ವನ್ಯಜೀವಿಗಳ ಸಂರಕ್ಷಣೆಗೆ 27 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದುವರೆಗೆ 19 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕೈಗಾ ಅಧಿಕಾರಿಗಳು ಮಾಹಿತಿ ನೀಡಿದರು.110 ಕೋಟಿ ಬಳಕೆ3 ಮತ್ತು 4 ನೇ ಘಟಕದ ನಿರ್ದೇಶಕ ಎಸ್.ಕೆ.ಝಾ, 1 ಮತ್ತು 2 ನೇ ಘಟಕದ ನಿರ್ದೇಶಕ ಬಿ.ಶ್ರೀರಾಮ್, 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕ ಜೆ.ಎಲ್.ಸಿಂಗ್, ಎನ್ ಪಿಸಿಐಎಲ್ ಕಾರ್ಪೊರೇಟ್ ನಿರ್ವಹಣೆ ವಿಭಾಗದ ಉಮೇದ ಯಾದವ್, ಕೈಗಾ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್ ಇದ್ದರು. ತಾಂತ್ರಿಕ ಅಽಕಾರಿಗಳಾದ ರಮೇಶ್, ಕೆ.ಚಿತ್ತರಂಜನ್, ನಿವೃತ್ತ ಅಽಕಾರಿ ಡಾ.ಹೇಮಂತ್ ವಿವಿಧ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ನೀಡಿದರು.ಕೈಗಾ ಐದು ಮತ್ತು ಆರನೇ ಘಟಕಕ್ಕಾಗಿ ಸದ್ಯ 390 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆಗಳು ನಡೆದಿವೆ. ಸ್ಥಳೀಯರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನಡೆಸಲಾಗುತ್ತಿದೆ. ಕೈಗಾ 1 ರಿಂದ 4 ನೇ ಘಟಕದಲ್ಲಿ ಒಟ್ಟು 595 ಉದ್ಯೋಗಿಗಳಿದ್ದು, ಅವರಲ್ಲಿ ಶೇ.80 ಕ್ಕೂ ಅಽಕ ಕರ್ನಾಟಕದವರಿದ್ದಾರೆ. ಒಟ್ಟು 2057 ಗುತ್ತಿಗೆ ಉದ್ಯೋಗಿಗಳ ಪೈಕಿ 1730 ಕರ್ನಾಟಕದವರಿದ್ದಾರೆ. ಅದರಲ್ಲಿ 1601 ಜನ ಉತ್ತಕನ್ನಡ ಜಿಲ್ಲೆಯವರಾಗಿದ್ದಾರೆ, 1058 ಕೈಗಾದ 16 ಕಿಮೀ ವ್ಯಾಪ್ತಿಯ ಒಳಗಿನವರಾಗಿದ್ದಾರೆ ಎಂದರು.ನಿರ್ಮಾಣ ಕಾಮಗಾರಿಯಲ್ಲಿ 8 ರಿಂದ 12 ಸಾವಿರ ಕಾರ್ಮಿಕರು, ತಂತ್ರಜ್ಞರ ಅವಶ್ಯಕತೆ ಇದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ 1989 ರಲ್ಲೇ 120 ಹೆಕ್ಟೇರ್ ಜಮೀನನ್ನು ಸ್ವಾಽÃನ ಮಾಡಲಾಗಿತ್ತು 1 ರಿಂದ ನಾಲ್ಕನೇ ಘಟಕಕ್ಕಾಗಿ 65.91 ಹೆಕ್ಟೇರ್ ಜಮೀನು ಬಳಸಲಾಗಿದೆ. ಬಾಕಿ ಇರುವ 64 ಹೆಕ್ಟೇರ್ ಜಾಗದಲ್ಲಿ ಐದು ಮತ್ತು ಆರನೇ ನೇ ಅಣು ವಿದ್ಯುತ್ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹೊಸ ಜಾಗ ಬೇಕಿಲ್ಲ. ಉದ್ಯೋಗಿಗಳ ಟೌನ್ ಶಿಪ್ ಅಥವಾ ನಿರ್ಮಾಣ ಕಾರ್ಮಿಕರ ವಾಸ್ತವ್ಯಕ್ಕೂ ಹೊಸ ಜಾಗ ಬೇಕಿಲ್ಲಎಂದರು.ಸ್ಥಳೀಯರಿಗೆ ಉದ್ಯೋಗ:ಒಟ್ಟು ಮೂರು ಸಂಸ್ಥೆಗಳು ಘಟಕಗಳ ಕಾಮಗಾರಿಯನ್ನು ಕೈಗೊಳ್ಳುತ್ತಿವೆ. ರಿಯಾಕ್ಟರ್‌ಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿ ಟೆಂಡರ್ ಪಡೆದುಕೊಂಡಿದೆ. ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್ ಇಎಲ್) ಟೆಂಡರ್ ಪಡೆದುಕೊಂಡಿದೆ. ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿಯನ್ನು ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆಯೇ ಕೈಗೊಳ್ಳಲಿದೆ. ಪ್ರತಿ ಹಂತದಲ್ಲೂ ಸುರಕ್ಷತೆಯ ಮಾನದಂಡಗಳನ್ನು ಸಂಬAಧಪಟ್ಟ ಸರ್ಕಾರಿ ಸಂಸ್ಥೆಗಳು ಖಚಿತಪಡಿಸಿಕೊಳ್ಳಲಿವೆ ಎಂದರು.21 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, 2030 ರ ಹೊತ್ತಿಗೆ ಐದನೇ ಘಟಕದಲ್ಲಿ,2031 ರ ಹೊತ್ತಿಗೆ ಆರನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಭಾರಜಲ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಘಟಕಗಳಲ್ಲಿ ಆಧುನಿಕ ತಂತ್ರಜ್ಞಾನದ ಥರ್ಡ್ ಜನರೇಶನ್ ರಿಯಾಕ್ಟರ್ ಗಳನ್ನು ಅಳವಡಿಸಲಾಗುತ್ತಿದೆ. ರಿಯಾಕ್ಟರ್ ನಿರ್ಮಾಣಕ್ಕೆ ಈಗಾಗಲೇ ಉತ್ಖನನ ಚಟುವಟಿಕೆಗಳು ಪೂರ್ಣಗೊಂಡಿವೆ. ನೆಲಮಟ್ಟದಿಂದ ಸುಮಾರು 20 ಮೀಟರ್ ಆಳ ತೋಡಿ ಅಲ್ಲಿಂದ ತಳಪಾಯ ಕಟ್ಟಲು ಸಿದ್ಧತೆ ನಡೆಸಲಾಗಿದೆ. 100 ಮೀಟರ್ ಅಳವದವರೆಗೂ ಭೂಗರ್ಭದ ಪರೀಕ್ಷೆಗಳನ್ನು ನಡೆಸಲಾಗಿದೆ.2030 ರ ಹೊತ್ತಿಗೆ ಪೂರ್ಣಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ಕೇಂದ್ರ ಸರ್ಕಾರ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿದ್ದು, ಪರಿಸರ ಮಂತ್ರಾಲಯ, ಮಾಲಿನ್ಯ ನಿಯಂತ್ರಣ ಮಂಡಳಿ, ವನ್ಯಜೀವಿ ಮಂಡಳಿ ಸೇರಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ದಾವೆಯೊಂದರ ಸಂಬAಧ ಮರು ಅಧ್ಯಯನ ನಡೆದಿದ್ದು, ಅನಮೋದನೆಯಷ್ಟೇ ಬಾಕಿ ಇದೆ ಎಂದರು.ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರದಲ್ಲಿ ನೂತನವಾಗಿ ಐದು ಮತ್ತು ಆರನೇ ಘಟಕ ನಿರ್ಮಾಣಕ್ಕೆ ನವೆಂಬರ್ ನಲ್ಲಿ ತಳಪಾಯ ಕಾಂಕ್ರೀಟ್ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಕೇಂದ್ರದ ನಿರ್ದೇಶಕ ಬಿ.ವಿನೋದ ಕುಮಾರ್ ತಿಳಿಸಿದರು. ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕಬಿ.ವಿನೋದ ಕುಮಾರ್‌ ವಿದ್ಯುತ್ ಉತ್ಪಾದನಾ ವಿಧಾನಗಳ ಪೈಕಿ ಅತಿ ಕಡಿಮೆ ಮಾಲಿನ್ಯ ಉಂಟು ಮಾಡುವುದು ಅಣು ಶಕ್ತಿಯಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಸ್ಥಳೀಯರಿಗೆ ಯಾವುದೇ ವಿಕಿರಣದ ಅಪಾಯಗಳು ಸಂಭವಿಸುತ್ತಿಲ್ಲ ಎಂದು ಹಲವು ಅಧ್ಯಯನಗಳು ಹೇಳಿವೆ. ಸ್ಥಾವರವು ಸುರಕ್ಷಿತವಾಗಿ ವಿದ್ಯುತ್ ಉತ್ಪಾದನೆ ಮಾಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net