ಕೈಮಗ್ಗ ದಿನಾಚರಣೆ: ಯುವಕರು ದೇಶದಲ್ಲಿ ಜವಳಿ ಮತ್ತು ಕೈಮಗ್ಗ ಉಳಿಸುವದನ್ನು ಸವಾಲಾಗಿ ತೆಗೆದುಕೊಳ್ಳಬೇಕು: ಎಚ್.ಕೆ. ಪಾಟೀಲ್

WhatsApp Image 2024-08-07 at 5.03.31 PM (1)
Published on

ಗದಗ: ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜವಳಿ ಮತ್ತು ಕೈಮಗ್ಗ ಉಳಿಸುವುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.

ನಗರದ ನರಸಾಪೂರದಲ್ಲಿರುವ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಬುಧವಾರ ಕೈಮಗ್ಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟಸಿ ಅವರು ಮಾತನಾಡಿದರು.

ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಬೆಟಗೇರಿಯಲ್ಲಿ ಸ್ಥಾಪನೆಯಾಗಲೂ ಮೂಲ ಕಾರಣ ಸ್ಥಳೀಯ ನೇಕಾರರು, ಅಂದಿನ ಸರ್ಕಾರ ರಾಷ್ಟçದಲ್ಲಿ ಉತ್ತಮ ಜವಳಿ ನೀತಿ ಮಾಡಿ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿತು, ಅದರ ಪ್ರತಿ ಫಲವಾಗಿ ರಾಜ್ಯದಲ್ಲಿಯೇ ಏಕೈಕ ಕೈಮಗ್ಗ ಸಂಸ್ಥೆ ಗದಗ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು ಎಂದು ಹೇಳಿದರು.

ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮೊದಲು ಕುಣಿಮಗ್ಗದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು, ಕೈಮಗ್ಗದ ಇತಿಹಾಸ ಪ್ರಾರಂಭ ಆಗುವುದೇ ಕುಣಿ ಮಗ್ಗದಿಂದ ಹಾಗಾಗಿ ತರಬೇತಿದಾರರು ನೇಕಾರರ ಮನೆಗೆ ಹೋಗಿ ಕುಣಿ ಮಗ್ಗ ನೋಡಬೇಕು ಎಂದು ಅವರು ತಿಳಿಸಿದರು.

ಬೆಟಗೇರಿಯ ನೇಕಾರರ ಕೈಮಗ್ಗದ ಉತ್ಪಾದಾನೆಗಳು ಸಂಪೂರ್ಣವಾಗಿ ವಿದೇಶಕ್ಕೆ ರಪುö್ತ ಅಗುತ್ತಿದ್ದವು, ನೇಕಾರಿಕೆ ಕೈತುಂಬಾ ಸಂಬಳ, ಪ್ರತಿದಿನ ಕೆಲಸವಿತ್ತು. ಕಾರಣಾಂತರಗಳಿAದ ಕೈಮಗ್ಗದಲ್ಲಿ ಆದಾಯ ಕುಸಿದು, ಕೈಮಗ್ಗ ನಿಂತು 25 ಸಾವಿರಗಳಿದ್ದ ಕೈಮಗ್ಗಗಳು ಕೇವಲ 3 ಸಾವಿರಕ್ಕೆ ಕುಸಿದಿವೆ, ಹೀಗೆ ಮುಂದುವರೆದರೆ ಕೈಮಗ್ಗ ಉಳಿಯುವುದು ಕಷ್ಟಕಾರಕ ಎಂದು ಆತಂಕ ವ್ಯಕ್ತಪಡಿಸಿದರು.

ಕೈಮಗ್ಗದಲ್ಲಿ ಉತ್ಪಾದನೆ ಮಾಡಿದ ಬಟ್ಟೆಯ ಹಾಗೇ ಬೇರೆಯಾವುದೇ ರೀತಿಯ ಯಂತ್ರಗಳಿAದ ತಯಾರಿಸಿದರೆ ಅಂತಹ ಉತ್ತಮ ಗುಣಮಟ್ಟದ ಬೀರುವುದಿಲ್ಲ. ಅತಿದೊಡ್ಡ ಉದ್ಯೋಗ ನೀಡುವ ಕೈಮಗ್ಗ ಕ್ಷೇತ್ರ ಎಲ್ಲರ ನಿರ್ಲಕ್ಷ÷್ಯದಿಂದ ಕೊನೆ ಹಂತದ ಅಂಚಿಗೆ ಬಂದು ತಲುಪಿದೆ. ಕೈಮಗ್ಗ ಸಂಸ್ಥೆಯ ತರಬೇತಿಗಾರರಿಗೆ ಮತ್ತು ಬೋದಕ ವರ್ಗದವರಿಗೆ ಕೈಮಗ್ಗ ಉಳಿಸುವು ಸವಾಲಾಗಿದೆ, ಪ್ರರಿಶ್ರಮದಿಂದ ಕೈಮಗ್ಗ ಉಳಿಸುವ ಕಾರ್ಯವಾಗಬೇಕು ಎಂದರು.

ನೇಕಾರರು ಅತಿಬುದ್ದಿವಂತರು ಬೆವರು ಸುರಿಸಿ ಕಷ್ಟಪಟ್ಟು ಕೆಲಸಮಾಡುವ ಕಾಯಕಯೋಗಿಗಳು, ಕೈಮಗ್ಗ ಉಳಿಸುವುದರ ಬಗ್ಗೆ ತಮ್ಮ ಅನುಭವ ಮೂಲಕ ಚಿಂತನೆ, ಚರ್ಚೆವಾಗುಬೇಕು ಎಂದು ಹೇಳಿದರು.

ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಿAದ ಅಗತ್ಯವಾದ "ಕೈಮಗ್ಗ ಉಳಿಸಲು ನಾವೇನು ಮಾಡಬೇಕು" ಎಂಬ ಶೀರ್ಷಿಕೆಯಡಿ ಸಾರ್ವಜನಿಕರೊಳಂಡ ಬೃಹತ್ ಕಾರ್ಯಗಾರ ಮಾಡಬೇಕು ಎಂದು ಸೂಚಿಸಿದರು.

ನೇಕಾರರ ಬದುಕು ಹಸನಾಗಿಸಲು ದೇಸಿ ಉತ್ಪನ್ನಗಳ ಬಳಕೆ ಎಷ್ಟು ಅವಶ್ಯಕ ಎನ್ನುವುದರ ಬಗ್ಗೆ ಸಚಿವರಾದ ಎಚ್.ಕೆ. ಪಾಟೀಲ ಅವರು ವಿವರವಾಗಿ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರು ಮಾತನಾಡಿ, 1905 ರಲ್ಲಿ ಆರಂಭವಾದ ಸ್ವದೇಶಿ ಚಳುವಳಿಯ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಭಾತರ ಸರ್ಕಾರವು ರಾಷ್ಟಿçÃಯ ಕೈಮಗ್ಗ ದಿನವನ್ನು ಆಚರಣೆ ಮಾಡಲು ನಿರ್ಧರಿಸಿತು. ಬ್ರಿಟಿಷ್ ಸರ್ಕಾರದ ಬಂಗಾಳ ವಿಭಜನೆಯ ವಿರುದ್ಧ ಪ್ರತಿಭಟನೆಗಾಗಿ ಕೊಲ್ಕತ್ತಾದ ಟೌನ್ ಹಾಲ್‌ನಲ್ಲಿ ಸ್ವದೇಶಿ ಚಳುವಳಿ ಆರಂಭವಾಯಿತು. ಈ ಚಳುವಳಿಯ ಮುಖ್ಯ ಉದ್ದೇಶ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದಾಗಿತ್ತು ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದಾಗಿತ್ತು. ಸ್ವದೇಶಿ ಚಳುವಳಿಯ ಸವಿನೆನಪಿಗಾಗಿ ಕೈಮಗ್ಗ ದಿನಾಚರಣೆ ಆಚರಣೆ ಮಾಡಲಾಯಿತು ಎಂದರು.

ಸ್ವದೇಶಿ ಉತ್ಪಾನ್ನಗಳನ್ನು ಬಳಸುವ ಮನಸ್ಥಿತಿ ಎಲ್ಲರಲ್ಲಿ ಬಂದಾಗ ಮಾತ್ರವೇ ಕೈಮಗ್ಗ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೈಮಗ್ಗ ತಂತ್ರಜ್ಞಾನ ಸಂಸ್ಥೆಯ ಕುರಿತು ವ್ಯಾಪಕವಾಗಿ ಪ್ರಚಾರವಾಗಿಬೇಕು ಇಂತಹ ಸಂಸ್ಥೆ ಗದಗ ಜಿಲ್ಲೆಯಲ್ಲಿ ರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಮತ್ತು ಕೈಮಗ್ಗ ನೇಕಾರರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೈಮಗ್ಗ ಸಲಹೆಗಾರರಾದ ಶ್ರೀಮತಿ ವೃಂದ ಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ, ಕೈಗಾರಿಕಾ ನೇಕಾರ ಸಂಘದ ಅಧ್ಯಕ್ಷ ಅಶೋಕ ಬಣ್ಣದ, ಜಿಲ್ಲಾ ಜವಳಿ ಉತ್ಪಾದಕರ ಸಂಘದ ಅಧ್ಯಕ್ಷ ಅನೀಲ್ ಎಸ್ ಗಡ್ಡಿ, ಕೆ.ಎಸ್.ಟಿ.ಐ.ಡಿ.ಸಿ.ಎಲ್ ಮಾಜಿ ನಿರ್ದೇಶಕ ಶಿವಕುಮಾರ ಪಾಟೀಲ್, ಮಲ್ಲಿಕಾರ್ಜುನ ಬೆಲ್ಲದ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net