ತಾಂಬಾದಲ್ಲಿ ಕೈ- ಕಮಲ ಪಕ್ಷ ಬೆಂಬಲಿರಗ ಹೊಂದಾಣಿಕೆ

Kai-Kamala Party supporters clash in Tamba
ತಾಂಬಾ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆ ಆಸ್ಮಾ ಚಿಕ್ಕಗಸಿ, ಉಪಾಧ್ಯಕ್ಷೆ ವಿಮಲಾಬಾಯಿ ನಾಟಿಕಾರ ಇಬ್ಬರೂ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ವಿಜಯೋತ್ಸವ ಆಚರಿಸಿದರು. ರವಿಕುಮಾರ ಚವ್ಹಾಣ, ಜೆ.ಎಸ್.ಹತ್ತಳ್ಳಿ, ರಾಚಪ್ಪ ಗಳೇದ ಇತರರಿದ್ದರು.
Published on

ತಾಂಬಾ: ಕಳೆದ ಬಾರಿ ಜಿದ್ದಾಜಿದ್ದಿನಿಂದ ಚುನಾವಣೆ ನಡೆದಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಎಲ್ಲ 39 ಸದಸ್ಯರು ಕೂಡಿಕೊಂಡು ಅಧ್ಯಕ್ಷ- ಉಪಾಧ್ಯಕ್ಷರನ್ನು ವಿರೋಧವಾಗಿ ಆಯ್ಕೆ ಮಾಡಿದರು.

ಗ್ರಾಪಂಗೆ ಅಧ್ಯಕ್ಷರಾಗಿ ಆಸ್ಮಾ ರಜಾಕಸಾಬ ಚಿಕ್ಕಗಸಿ ಹಾಗೂ ಉಪಾಧ್ಯಕ್ಷರಾಗಿ ವಿಮಲಾಬಾಯಿ ಶಿವಪ್ಪ ನಾಟಿಕಾರ ಅವಿರೋಧವಾಗಿ ಶನಿವಾರ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಪಿಡಿಒ ಶ್ರೀಕಾಂತ ಹಡಲಸಂಗ, ಗ್ರಾಮ ಆಡಳಿತ ಅಧಿಕಾರಿ ಎಂ.ಎಸ್.ಮಾರಲಬಾವಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ತಾಲೂಕು ಹಾಗೂ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಿದ್ದರು. ಎಲ್ಲ 39 ಸದಸ್ಯರು ಭಾಗವಹಿಸಿದ್ದರು.

ಕಾಂಗ್ರೆಸ್ ಮುಖಂಡ ರವಿಕುಮಾರ ಚವ್ಹಾಣ, ಜೆ.ಎಸ್.ಹತ್ತಳ್ಳಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ರಾಮಚಂದ್ರ ದೊಡಮನಿ, ಪರಶುರಾಮ ಬಿಸನಾಳ, ನಾಗಪ್ಪ ಕುರುಬತ್ತಳಿ, ಸಿದ್ದು ಹತ್ತಳ್ಳಿ, ಬಿಜೆಪಿ ಮುಖಂಡರಾದ ರಾಜು ಗಂಗನಹಳ್ಳಿ, ಪ್ರಕಾಶ ಮುಂಜಿ, ಗುರುಸಂಗಪ್ಪ ಬಾಗಲಕೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net