ಕಾಹೆರ್ ಗ್ರಂಥಾಲಯಕ್ಕೆ ಐಎಸ್‌ಒ ಮಾನ್ಯತೆ

02Jaggu8
ಬೆಳಗಾವಿ ಕಾಹೆರ್‌ನ ಡಾ.ಎಸ್.ಜಿ.ದೇಸಾಯಿ ಗ್ರಂಥಾಲಯಕ್ಕೆ ಟಿಯುವಿ ಎಸ್‌ಯುಡಿ ದಕ್ಷಿಣ ಏಷ್ಯಾದ ಪ್ರಮುಖ ಪ್ರಮಾಣೀಕರಣ, ಪರೀಕ್ಷೆ ಮತ್ತು ಆಡಿಟಿಂಗ್ ಕಂಪನಿಯು ಐಎಸ್‌ಒ 9001:2015 ಪ್ರಮಾಣೀಕರಣ ನೀಡಿತು. ಶ್ರೀಹರಿ ಶೇಡಬಾಳ್ಕರ್, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ನಿತಿನ್ ಗಂಗನೆ, ಡಾ.ಎಂ.ಎಸ್.ಗಣಾಚಾರಿ, ಡಾ.ಎಂ.ಎ.ಉಡಚಣಕರ ಇತರರಿದ್ದರು.
Published on

ಬೆಳಗಾವಿ: ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್(ಕಾಹೆರ್)ನ ಡಾ.ಎಸ್.ಜಿ.ದೇಸಾಯಿ ಗ್ರಂಥಾಲಯಕ್ಕೆ ಐಎಸ್‌ಒ 9001:2015 ಪ್ರಮಾಣೀಕರಣ ದೊರೆತಿದೆ. ದಕ್ಷಿಣ ಏಷ್ಯಾದ ಪ್ರಮುಖ ಪ್ರಮಾಣೀಕರಣ, ಪರೀಕ್ಷೆ ಮತ್ತು ಆಡಿಟಿಂಗ್ ಕಂಪನಿಯಾದ ಟಿಯುವಿ ಎಸ್‌ಯುಡಿ ಶುಕ್ರವಾರ ಕಾಹೆರ್‌ನ ಲೈಬ್ರರಿ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಮಾಣೀಕರಣ ನೀಡಿತು.

ಕಂಪನಿ ಪ್ರತಿನಿಧಿ ಶ್ರೀಹರಿ ಶೇಡಬಾಳ್ಕರ್ ಮಾತನಾಡಿ, ಟಿಯುವಿ ಎಸ್‌ಯುಡಿ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್‌ನಿಂದ ಗ್ರಂಥಾಲಯ ವಲಯದಲ್ಲಿ ಪ್ರಮಾಣಪತ್ರ ಪಡೆದ ವಿಶ್ವದ ಮೊದಲ ವಿಶ್ವವಿದ್ಯಾಲಯ ಕಾಹೆರ್ ಎಂದು ತಿಳಿಸಿದರು. ಐಎಸ್‌ಒ 9001:2015 ಗುಣಮಟ್ಟ ನಿರ್ವಹಣಾ ವ್ಯವಸ್ಥೆಗೆ ಮಾನದಂಡ ನಿಗದಿಪಡಿಸುವ ಅಂತಾರಾಷ್ಟ್ರೀಯ ಮಾನ್ಯತೆ ಆಗಿದೆ. ಪ್ರಶಸ್ತಿಯು ಹಲವು ಸುಧಾರಣಾ ಕ್ರಮಗಳು, ಗುಣಮಟ್ಟದ ಅರ್ಹತೆಗಳನ್ನು ಒಳಗೊಂಡಿದೆ.

ಡಾ.ಎಸ್.ಜಿ.ದೇಸಾಯಿ ಗ್ರಂಥಾಲಯದ ಪ್ರಭಾರಿ ಅಧಿಕಾರಿ ಡಾ.ವಿಶ್ವನಾಥ ಪಟ್ಟಣಶೆಟ್ಟಿ ನೇತೃತ್ವದ ತಂಡಕ್ಕೆ ಉಪಕುಲಪತಿ ಡಾ.ನಿತಿನ್ ಗಂಗನೆ ಅಭಿನಂದಿಸಿದರು. ಕಾಹೆರ್ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಡಾ.ಎಂ.ಎ.ಉಡಚಣಕರ, ಎಲ್ಲ ಘಟಕ ಕಾಲೇಜುಗಳ ಪ್ರಾಚಾರ್ಯರು, ವಿವಿ ಅಧಿಕಾರಿಗಳು, ಗ್ರಂಥಪಾಲಕ ರವಿ ಶಿವನಾಯ್ಕರ್, ಕಿರಣ ಮಾಳವಡೆ, ಸುನಂದಾ ಪರಾಂಜಪೆ, ಗ್ರಂಥಾಲಯ ಸಿಬ್ಬಂದಿ ಇದ್ದರು. ಈ ವಿಶಿಷ್ಟ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net