ಕಾಹೆರ್, ಅಮ್ಸರ್ಗೋವಾ ಪ್ರೈ.ಲಿ. ನಡುವೆ ಒಡಂಬಡಿಕೆ

16manju4
ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಕಾಹೆರ್‌ನ ಸಭಾಂಗಣದಲ್ಲಿ ಬುಧವಾರ ಡಾ. ನಿತಿನ್.ಎಂ. ಗಂಗಾನೆ ಮತ್ತು ವಿಕ್ರಂ ನಹರ್‌ವಾರ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು. ಡಾ. ಎಂ.ಎಸ್.ಗಣಾಚಾರಿ, ಡಾ.ಮದನ್ ಗೋದ್ಬೋಲೆ ಇತರರಿದ್ದರು.
Published on

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ಕಾಹೆರ್‌ನ ಇನ್‌ಕುಬೇಶನ್ ಮತ್ತು ಇನೋವೇಶನ್ ೌಂಡೇಷನ್ (ಕೆಐಐಎ್)ಹಾಗೂ ಗೋವಾ ರಾಜ್ಯದ ಅಮ್ಸರ್ಗೋವಾ ಪ್ರೈ.ಲಿ. ನಡುವೆ ಆಯುರ್ವೇದ ಮತ್ತು ಸಸ್ಯ ಔಷಧ ಕ್ಷೇತ್ರದಲ್ಲಿ ನವೀನತೆ ಉತ್ತೇಜಿಸುವ ಉದ್ದೇಶದಿಂದ ಬುಧವಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.

ಆಯುರ್ವೇದ, ಸಸ್ಯಔಷಧ ನವೀನತೆ, ಸ್ಟಾರ್ಟ್‌ಅಪ್ ಇನ್‌ಕುಬೇಶನ್, ಸಂಯುಕ್ತ ಸಂಶೋಧನೆ ಮತ್ತು ಉತ್ಪನ್ನ ವಾಣಿಜೀಕರಣ ಉತ್ತೇಜಿಸುವುದು. ಬೋಧಕ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ, ಇಂಟರ್ನ್‌ಶಿಪ್, ತಾಂತ್ರಿಕ ತರಬೇತಿ ಮತ್ತು ಸಂಯುಕ್ತ ಕಾರ್ಯಾಗಾರ, ಬೂಟ್ ಕ್ಯಾಂಪ್ ಮತ್ತು ನವೀನತಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು ಒಡಂಬಡಿಕೆಯಲ್ಲಿ ಒಳಗೊಂಡಿದೆ. ಕಾಹೆರ್‌ನ ಉಪಕುಲಪತಿ ಡಾ.ನಿತಿನ್.ಎಂ. ಗಂಗಾನೆ, ಗೋವಾದ ಅಮ್ಸ್‌ರ್ಗೋವಾ ಪ್ರೈ.ಲಿ.ಸಿಇಒ ವಿಕ್ರಂ ನಹರ್‌ವಾರ ಒಡಂಬಡಿಕೆ ಪರಸ್ಪರ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕಾಹೆರ್‌ನ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಸಂಶೋಧನಾ ಸಲಹೆಗಾರ ಡಾ. ಮದನ್ ಗೋದ್ಬೋಲೆ, ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಹಾಸ್ ಕುಮಾರ ಶೆಟ್ಟಿ, ಕಿಐಐಎ್ನ ಪ್ರಧಾನ ವ್ಯವಸ್ಥಾಪಕ ರಿತೇಶ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net