ಕಾಗೋಡು ತಿಮ್ಮಪ್ಪ ರಾಜಕೀಯ ಜಂಗಮ: ಬಿ.ಎಲ್.ಶಂಕರ್ ಬಣ್ಣನೆ

Kagodu Thimmappa Appreciation Committee
ಕುವೆಂಪು ರಂಗಮಂದಿರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಲಾಯಿತು. ಡಾ. ಬಿ.ಎಲ್.ಶಂಕರ್, ಡಿ.ಎಚ್.ಶಂಕರಮೂರ್ತಿ, ಮಧು ಬಂಗಾರಪ್ಪ, ಕೆ.ಎಸ್.ಈಶ್ವರಪ್ಪ, ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಆರ್,ಕೆ.ಸಿದ್ದರಾಮಣ್ಣ, ಆಯನೂರು ಮಂಜುನಾಥ, ಎಸ್.ಎನ್.ಚನ್ನಬಸಪ್ಪ, ವಿ.ರಾಜು ಮತ್ತಿತರರಿದ್ದರು.
Published on

ಶಿವಮೊಗ್ಗ: ಹೋರಾಟವನ್ನೇ ತನ್ನ ಜೀವನವನ್ನಾಗಿಸಿಕೊಂಡು ಬಂದಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಒಬ್ಬ ರಾಜಕೀಯ ಜಂಗಮ ಇದ್ದಂತೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಬಣ್ಣಿಸಿದರು.

ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿಯಿಂದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರು ಹೋರಾಟಗಳ ಮೂಲಕ ನಿರಂತರವಾಗಿ ಸಕ್ರೀಯವಾಗಿದ್ದಾರೆ. ಸ್ಥಾವರ(ನಾಮಫಲಕ)ಗಳ ಮೇಲೆ ಅವರಿಗೆ ನಂಬಿಕೆ ಇಲ್ಲ. ಕಾಯಕವನ್ನೇ ಅವರ ಧ್ಯೇಯವನ್ನಾಗಿಸಿಕೊಂಡಿದ್ದಾರೆ ಎಂದರು.
ಇಂದು ರಾಜಕಾರಣದಲ್ಲಿ ಅನೇಕ ಸವಾಲುಗಳು ಎದುರಾಗಿವೆ. ಇಂತಹ ಸ್ಥಿತಿಯಲ್ಲಿ ಕಾಗೋಡು ಹೋರಾಟ, ಈಸೂರು ಸತ್ಯಾಗ್ರಹದಂತಹ ಚಳುವಳಿಗಳ ಇತಿಹಾಸ ನೆನಪಿಸಿಕೊಳ್ಳುವುದು ಅವಶ್ಯವಾಗಿದೆ. ಹೋರಾಟದ ಮೂಲಕ ರೈತರು, ಭೂ ರಹಿತರ ಪರವಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ದೊಡ್ಡತನವನ್ನು ಮೈಗೂಡಿಸಿಕೊಂಡು ಬಂದಿದ್ದಲ್ಲದೆ, ಲಕ್ಷಾಂತರ ಜನರಿಗೆ ಭೂಮಿ ಕೊಡಿಸಿರುವುದು ಕಾಗೋಡು ತಿಮ್ಮಪ್ಪ ಅವರ ದೊಡ್ಡ ಸಾಧನೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿದರು. ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಪ್ರಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ಆರ್.ಕೆ.ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಮಿತಿ ಗೌರವಾಧ್ಯಕ್ಷ ಡಾ. ಜಿ.ಡಿ.ನಾರಾಯಣಪ್ಪ, ಮಾಜಿ ಸಚಿವ್ ಕಿಮ್ಮನೆ ರತ್ನಾಕರ್, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್ಸಿ ಎಸ್.ರುದ್ರೇಗೌಡ, ಮೇಯರ್ ಎಸ್.ಶಿವಕುಮಾರ, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಮಾಜಿ ಎಂಎಲ್ಸಿಗಳಾದ ಆಯನೂರು ಮಂಜುನಾಥ, ಆರ್.ಪ್ರಸನ್ನಕುಮಾರ್, ಫ್ರಫುಲ್ಲಾ ಮಧುಕರ್, ಮುಖಂಡರಾದ ಎಂ.ಶ್ರೀಕಾಂತ್, ನಗರದ ಮಹಾದೇವಪ್ಪ, ಪದ್ಮನಾಭ, ಪಿ.ಪುಟ್ಟಯ್ಯ, ಕಲಗೋಡು ರತ್ನಾಕರ್, ವಿ.ರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net