ಕಾಗೋಡು ಬದ್ಧತೆ ಮಾದರಿ: ಸಚಿವ ಮಧು ಬಂಗಾರಪ್ಪ

27sgr4
ಸಾಗರದ ಈಡಿಗ ಸಮುದಾಯ ಭವನದಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘದಿAದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ್, ಡಾ. ಎಸ್.ರಾಮಪ್ಪ, ಪರಮೇಶ್ವರಪ್ಪ, ಪರಶುರಾಮಪ್ಪ, ಕಲಸೆ ಚಂದ್ರಪ್ಪ, ತಾರಾಮೂರ್ತಿ ಇತರರಿದ್ದರು.
Published on

ಸಾಗರ: ದಣಿವರಿಯದ ನಾಯಕ ಕಾಗೋಡು ತಿಮ್ಮಪ್ಪ ಅವರ ಶಿಸ್ತು, ಹೋರಾಟ, ಬದ್ಧತೆ, ಭೂಮಿ ಬದುಕಿಗೆ ನ್ಯಾಯ ದೊರಕಿಸಿಕೊಟ್ಟ ಅವರ ಇಚ್ಛಾಶಕ್ತಿ ನಮಗೆಲ್ಲ ಮಾರ್ಗಸೂಚಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದಿAದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಲೆನಾಡು ಭಾಗದ ಬಗರ್‌ಹುಕುಂ, ಅರಣ್ಯಹಕ್ಕು, 94ಸಿ ಮತ್ತು 94ಸಿಸಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಹಕ್ಕು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ಕೊಡಿಸಲು ಹಿರಿಯ ಅಕಾರಿಗಳ ಜತೆ ಏಳೆಂಟು ಸಭೆ ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.
ಹಿಂದಿನ ಸರ್ಕಾರ ಮುಳುಗಡೆ ಸಂತ್ರಸ್ತರ ಹಕ್ಕು ಕಿತ್ತುಕೊಂಡಿದೆ. ಆದರೆ ನಮ್ಮ ಸರ್ಕಾರ ಹಕ್ಕು ಕೊಡುತ್ತದೆ. ಸರ್ಕಾರ ಶಿಕ್ಷಣದಂತಹ ಮಹತ್ವದ ಖಾತೆ ನೀಡಿದ್ದು, ಮಕ್ಕಳ ಭವಿಷ್ಯ ರೂಪಿಸಲು ಅಗತ್ಯ ಬದಲಾವಣೆ ತರುವುದಾಗಿ ತಿಳಿಸಿದರು.
ಲೋಕಸಭೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ತಯಾರಿ ನಡೆಸಲಾಗುತ್ತಿದೆ. ನಾನು ಈ ಹಿಂದೆ ಶಾಸಕನಾದಾಗ ಒಂದೇ ದಿನಕ್ಕೆ 1,900 ಹಕ್ಕುಪತ್ರಗಳನ್ನು ಸೊರಬದಲ್ಲಿ ಕಾಗೋಡು ತಿಮ್ಮಪ್ಪ ಅವರು ನನ್ನ ಕೈಯಿಂದ ಕೊಡಿಸಿದರು ಎನ್ನುವ ಧನ್ಯತೆ ಇದೆ. ಈಗ ಕಾಂಗ್ರೆಸ್ ಆಡಳಿತದಲ್ಲಿದ್ದು ಸಮಾಜ ಮತ್ತು ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಈಡಿಗ ಸಮುದಾಯದವರಿದ್ದಾರೆ. ಹಿಂದಿನ ಸರ್ಕಾರದ ಅವಽಯಲ್ಲಿ ಸಮಾಜದ ಸಚಿವರು, ಶಾಸಕರಿದ್ದರೂ ಅವರಿಂದ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಎಲ್ಲದ್ದಕ್ಕೂ ಆರ್‌ಎಸ್‌ಎಸ್‌ನವರ ಹತ್ತಿರ ಕೇಳಬೇಕು ಎನ್ನುತ್ತಿದ್ದರು. ಆದರೆ ನಮ್ಮ ಅವಽಯಲ್ಲಿ ಸರ್ಕಾರದಿಂದ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ತಂದುಕೊಡುವ ಪ್ರಯತ್ನ ನಡೆಸಲಾಗುತ್ತದೆ. ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ 500 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಸಮಾಜ ಸದೃಢವಾಗಿದ್ದರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಽಕಾರ ಎಂದಿಗೂ ನಮ್ಮನ್ನು ಹುಡಿಕಿಕೊಂಡು ಮನೆ ಬಾಗಿಲಿಗೆ ಬರಲಿಲ್ಲ. ಹೋರಾಟವೇ ನಮಗೆ ಅಽಕಾರ ತಂದುಕೊಟ್ಟಿತು. ಸಮಾಜ ಗೊತ್ತು ಗುರಿಯೊಂದಿಗೆ ಶಿಸ್ತು ಬದ್ಧವಾಗಿ ನಡೆದರೆ ಯಶಸ್ಸು ಕಾಣುತ್ತದೆ ಎನ್ನುವುದಕ್ಕೆ ಸಾಗರದ ಸಮಾಜದ ಸಂಘಟನೆಯೇ ಸಾಕ್ಷಿ ಎಂದು ಹೇಳಿದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಒಗ್ಗಟ್ಟಿನಿಂದಿದ್ದರೆ ಎಂತಹ ಸಮಸ್ಯೆಗಳನ್ನೂ ಎದುರಿಸಬಹುದು. ನನ್ನ ಕೈಲಾದಷ್ಟು ಸಮಾಜದ ಬೆಳವಣಿಗೆಗೆ ಸಹಕಾರ ಮಾಡುತ್ತ ಬಂದಿದ್ದೇನೆ ಎಂದು ಹೇಳಿದರು.
ಸಂಘದ ಪದಾಽಕಾರಿಗಳಾದ ಟಿ.ಪರಮೇಶ್ವರಪ್ಪ, ಎಂ.ಸಿ.ಪರಶುರಾಮಪ್ಪ, ಕಲಸೆ ಚಂದ್ರಪ್ಪ, ತಾರಾಮೂರ್ತಿ, ಷಣ್ಮುಖ, ರವಿಕುಮಾರ್ ಸಿಗಂದೂರು, ಎಚ್.ಎನ್.ದಿವಾಕರ್, ಬಿ.ನಾಗರಾಜ್, ಎಂ.ಹಾಲಪ್ಪ, ಮಂಜಪ್ಪ ಮರಸ, ಟಿ.ವಿ.ಪಾಂಡುರAಗ ಇತರರಿದ್ದರು.

ಕಾಗೋಡು ಚಳವಳಿ ಮೂಲಕ ರಾಜಕೀಯ ಬದುಕಿಗೆ ಕಾಲಿಟ್ಟೆ. ಎರಡು ಬಾರಿ ಸೋತರೂ ಮೂರನೇ ಬಾರಿ ಶಾಸಕನಾಗಿ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಭೂಸ್ವಾಽÃನ ಕಾಯ್ದೆ ಜಾರಿಗೊಳಿಸಿ ಉಳುವವರಿಗೆ ಭೂಮಿಹಕ್ಕು ಕೊಡಿಸಿದ ತೃಪ್ತಿ ನನಗೆ ಇದೆ.|ಕಾಗೋಡು ತಿಮ್ಮಪ್ಪಮಾಜಿ ಸಚಿವ

ಕೋಟ ಸಮಾಜಕ್ಕೆ ಮಾಡಿದ್ದೇನು?
ಈಡಿಗ ಸಮುದಾಯದ ಹಕ್ಕುಗಳಿಗೆ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜದ ಕೋಟದಲ್ಲಿ ಮಂತ್ರಿಯಾದರು. ಆದರೆ ಸಮಾಜಕ್ಕೆ ಮಾಡಿದ್ದಾದರೂ ಏನು? ಹಿಂದಿನ ಸರ್ಕಾರ ಸಮುದಾಯವನ್ನು ಬಳಸಿಕೊಂಡು ವಂಚನೆ ಮಾಡಿತು ಎಂದು ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು. ನೀವು ಯಾವುದೇ ಪಕ್ಷವನ್ನಾದರೂ ಬೆಂಬಲಿಸಿ, ಸಮಾಜದ ಸಂಕಷ್ಟ ಸಮಸ್ಯೆಗಳಿಗೆ ಒಟ್ಟು ನಿಂತು ಸಹಕರಿಸಿ. ಕೆಲವರು ಸಮಾಜದ ಕೋಟದಲ್ಲಿ ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಜಾತಿಯಲ್ಲಿ ಗುರುತಿಸಿಕೊಳ್ಳುವುದೆಂದರೆ ಅಸಡ್ಡೆ. ಮೊದಲು ಅದರಿಂದ ಹೊರಬನ್ನಿ. ಸಮಾಜದವರು, ಸಮಸ್ಯೆ ಎಂದು ಬಂದರೆ ಸಹಕರಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು.
ಡಾಕ್ಟರೇಟ್ ಕೊಡಿ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದಿAದ ಮನವಿ ನೀಡಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈಡಿಗ ಸಮುದಾಯದ ಕಟ್ಟಡಕ್ಕೆ ಅನುದಾನ, ಸಮಾಜ ನಡೆಸುತ್ತಿರುವ ಮಹಿಳಾ ವಸತಿ ನಿಲಯಕ್ಕೆ ಆರ್ಥಿಕ ಸಹಕಾರ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಕೊಡುವ ಗೌರವ ಡಾಕ್ಟರೇಟ್‌ನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಸಮಾಜ ಇಲ್ಲದಿದ್ದರೆ ನಾವಿಲ್ಲ. ಸಮಾಜ ನಮಗೆ ಸ್ಥಾನಮಾನ ಜತೆಗೆ ಗೌರವ ತಂದು ಕೊಟ್ಟಿದೆ. ಅಂತಹ ಸಮಾಜವನ್ನು ರಕ್ಷಣೆ ಮಾಡಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಜವಾಬ್ದಾರಿ. ಒಂದು ಸಮಾಜದಿಂದ ನಾವು ಗೆಲುವು ಸಾಽಸಲು ಸಾಧ್ಯವಿಲ್ಲ. ಎಲ್ಲರ ಸಹಕಾರವನ್ನೂ ಪಡೆಯಬೇಕು. ಸಮಾಜದ ಒಳಿತಿಗೂ ತೊಡಗಿಕೊಳ್ಳಬೇಕು.|ಭೀಮಣ್ಣ ನಾಯ್ಕ ಶಿರಸಿ-ಸಿದ್ದಾಪುರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net